ಜೀವ ವೈವಿದ್ಯತೆ ಸಂರಕ್ಷಣೆ ನಮ್ಮೆಲ್ಲರ ಹೊಣೆ'
ಗೌರಿಬಿದನೂರು: ಜೀವವೈವಿಧ್ಯ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯದರ್ಶಿ ಕೆ.ಎನ್. ನಾಗರಾಜ್ ನುಡಿದರು. ಆವರು ಬುಧವಾರ ಹುದುಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ಪರಿಸರ ಹಾಗೂ ಅರಣ್ಯ ಸಚಿವಾಲಯ, ಆಕ್ಷನ್ ಫಾರ್ ಸೋಷಿಯಲ್ ಆಂಡ್ ಎಜುಕೇಷನಲ್ ಡೆವಲಪಮೆಂಟ್ ಅಸೊಷಿಯೆಷನ್, ಸ್ವಯಂ ಸೇವಾ ಸಂಸ್ಥೆ ಜಂಟಿಯಾಗಿ ರಾಷ್ಟ್ರೀಯ ಪರಿಸರ ಜಾಗಣತಿ ಆಂದೋಲನ 2012-13 ಕಾರ್ಯಕ್ರಮದಡಿ ಜೀವ ವೈವಿದ್ಯ ಸಂರಕ್ಷಣೆ ಎಂಬ ಕೇಂದ್ರ ವಿಷಯದ ಕುರಿತು ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮವನ್ನು ಸಸಿ ನೆಡುವುದರ ಮೂಲಕ ಪ್ರಾರಂಭಿಸಲಾಯಿತು. ಮುಖ್ಯವಾಗಿ ಪ್ರಕೃತಿಯಲ್ಲಿನ ನೈಸರ್ಗಿಕ ಸಂಪನ್ಮೂಲಗಳಾದ ನೀರು, ಖನಿಜಗಳು, ಮಿತವಾಗಿದ್ದು, ಅವುಗಳ ಬಳಕೆಯನ್ನು ಎಚ್ಚರಿಕೆಯಿಂದ ಮಿತವಾಗಿ ಬಳಸಬೇಕು, ಸೂರ್ಯನಿಂದ ಸಿಗುವ ಬೆಳಕು, ಗಾಳಿಯನ್ನು ಮಲಿನವಾಗದಂತೆ ತಡೆಯಬೇಕಾದರೆ ಗಿಡಮರಗಳನ್ನು ಬೆಳಸಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು.
ರಮೇಶ್ ಅವರು ಪ್ರಕೃತಿಯಲ್ಲಿರುವ ರಣಹದ್ದುಗಳನ್ನು ನಾವು ಕಾಣಲು ಸಿಗುತ್ತಿಲ್ಲ. ಇದೇ ರೀತಿ ಸಾಕಷ್ಟು ಜೀವರಾಶಿಗಳು ಮಾಯವಾಗುತ್ತಿವೆ. ಇದಕ್ಕೆ ನಾವೆಲ್ಲರೂ ಕಾರಣವಾಗಿರುತ್ತೇವೆ, ಪಾಶ್ಚಾತ್ಯ ತಳಿಗಳನ್ನು ಕಡಿಮೆ ಮಾಡಿ ದೇಶಿಯ ಪ್ರಾಣಿಗಳನ್ನು (ಹಸು,ಎಮೆ..,) ಸಾಕಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ಎಂದು ತಿಳಿಸಿದರು.