ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಬೆಂಗಳೂರು: ಕರ್ನಾಟಕ ರಾಜ್ಯ ದೇವಾಂಗ ನೌಕರರ ಸಂಘ, ಮತ್ತು ದೇವಾಂಗ ಸಮಾಜ ವಿಚಾರ ವೇದಿಕೆ ಆಶ್ರಯದಲ್ಲಿ ಎಸ್‌ಎಸ್‌ಎಲ್‌ಸಿ/ಐಸಿಎಸ್‌ಇ /ಸಿಬಿಎಸ್‌ಇ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದಿರುವ ಸಮಾಜದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಿದೆ. ಅಲ್ಲದೆ ಪದವಿ ಹಾಗೂ ಸ್ನಾತಕೋತರ ಪದವಿ ಪರೀಕ್ಷೆಗಳಲ್ಲಿ ವಿಶ್ವವಿದ್ಯಾಲಯಗಳಿಂದ ಚಿನ್ನದ ಪದಕ ಪಡೆದವರು, ಈ ವರ್ಷ ಪಿಎಚ್‌ಡಿ ಪಡೆದವರು, ರಾಜ್ಯ/ ಕೇಂದ್ರ ಲೋಕಸೇವಾ ಆಯೋಗದಿಂದ ಆಯ್ಕೆಯಾದ ಅಧಿಕಾರಿಗಳು ಸಹ ಪ್ರತಿಭಾ ಪುರಸ್ಕಾರಕ್ಕೆ ಅರ್ಹರಾಗಿರುತ್ತಾರೆ. ಅರ್ಹರಾದವರು ವಿವರಗಳನ್ನು ಜೂ.30ರೊಳಗೆ ಕಳುಹಿಸಬೇಕು. ವಿಳಾಸ: ಅಧ್ಯಕ್ಷರು, ಕರ್ನಾಟಕ ರಾಜ್ಯ ದೇವಾಂಗ ನೌಕರರ ಸಂಘ(ರಿ), ದೇವಾಂಗ ಹಾಸ್ಟೆಲ್ ಕಟ್ಟಡ,ದೇವಾಂಗ ಹಾಸ್ಟೆಲ್ ರಸ್ತೆ, ಸಂಪಂಗಿರಾಮನಗರ, ಬೆಂಗಳೂರು-560027. ಮೊಬೈಲ್ ಸಂಖ್ಯೆ: 9945133066/9448052513/9845163895.
ವಧು-ವರಾನೇಷ್ವಣೆ
ಬೆಂಗಳೂರು: ಬ್ರಾಹ್ಮಣ ವಧು- ವರಾನೇಷ್ವಣಾ ಕೇಂದ್ರದಲ್ಲಿ ಬ್ರಾಹ್ಮಣ ವಧು ವಯೋವುತಿ 28ರಿಂದ 42 ವರ್ಷದವರೆಗೂ 7ನೇ ತರಗತಿಯಿಂದ ಪದವಿ ಪಾಸ್ ಅಥವಾ ಫೇಲ್ ಅಲ್ಲದೆ ವಿಧವೆ, ವಿಚ್ಛೇದಿತೆ, ಹೆಚ್ಚು ಓದಿರದ ಹುಡುಗಿಯರನ್ನು ನೋಂದಣಿ ಮಾಡಿಕೊಳ್ಳಲಾಗುವುದು. ಪೋಷಕರು, ತಂದೆ-ತಾಯಿಗಳು ತಮ್ಮ ಮಗಳ ಇತ್ತೀಚಿನ ಫೋಟೋ, ಜಾತಕ, ಸಂಪೂರ್ಣ ವಿವರಗಳನ್ನು ಖುದ್ದಾಗಿ ಇಲ್ಲಿಗೆ ಸ್ಪೀಡ್ ಪೋಸ್ಟ್ ಅಥವಾ ಕೊರಿಯರ್ ಮೂಲಕ ಕಳುಹಿಸಬಹುದು. ವಿವರಗಳನ್ನು ದೂ: 26730287 ಮೂಲಕ ವಿಚಾರಿಸಬಹುದು.
ವೇದ ತರಗತಿ ಆರಂಭ
ಬೆಂಗಳೂರು: ಭಾರತೀಯ ವಿದ್ಯಾಭವನ ಸಂಸ್ಕೃತ ಮತ್ತು ವೇದಗಳ ನೂತನ ತಂಡದ ತರಗತಿಗಳನ್ನು ಈ ತಿಂಗಳ ಕೊನೆ ವಾರದಲ್ಲಿ ಅಥವಾ ಜುಲೈ ತಿಂಗಳ ಮೊದಲ ವಾರದಲ್ಲಿ ಆರಂಭ ಮಾಡುತ್ತಿದೆ. ವಿವರಗಳಿಗೆ ಭಾರತೀಯ ವಿದ್ಯಾಭವನದ ಕಚೇರಿಗೆ ಭೇಟಿ ನೀಡಿ ವಿಚಾರಿಸಬಹುದು. ದೂ: 22267303/ 22267421/ 22265746 ಅಥವಾ ಮೊ: 9845756908.