ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

60 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಅಪಹರಿಸಿ ಪರಾರಿ

Rashmi Kasaragodu
Updated On : 14 Jun 2013, 12:40 pm

ಕ.ಪ್ರ.ವಾರ್ತೆ ಟಿ ನೆಲಮಂಗಲ ಟಿ ಜೂ.13
ಜಮೀನಿನಲ್ಲಿ ದನಗಳನ್ನು ಮೇಯಿಸುತ್ತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ 60 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಸರಗಳ್ಳರು ಚಾಕು ತೋರಿಸಿ ಬೆದರಿಸಿ ಚಿನ್ನದ ಸರ ಅಪಹರಿಸಿಕೊಂಡು ಪರಾರಿಯಾಗಿರುವ ಘಟನೆ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಮಧ್ಯಾಹ್ನ 2 ಗಂಟೆಯ ಸುಮಾರಿನಲ್ಲಿ ಹೊನ್ನೇನಹಳ್ಳಿ ಗ್ರಾಮದ ಸಿದ್ದರಾಜಮ್ಮ ತಮ್ಮ ದನಗಳನ್ನು ಬಿಟ್ಟುಕೊಂಡು ಮೇಯಿಸುತ್ತಿದ್ದಾಗ ಶಿವಗಂಗೆ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ಒಮ್ಮೆಲೆ ಹತ್ತಿರ ಬಂದು ಕುತ್ತಿಗೆಗೆ ಚಾಕು ತೋರಿಸಿ ಚಿನ್ನದ ಒಡವೆ ಬಿಚ್ಚಿಕೊಡುವಂತೆ ಎದುರಿಸಿದರು.ಭಯಪಟ್ಟುಕೊಂಡು ನಾನು ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಬಿಚ್ಚುಕೊಟ್ಟೆ. ನಂತರ ಕಿವಿಯಲ್ಲಿನ ಓಲೆಗಳನ್ನು ಬಿಚ್ಚಿ ಕೊಡು ಇಲ್ಲದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಅಷ್ಟರಲ್ಲಿ ರಸ್ತೆಯಲ್ಲಿ ಬೇರೊಂದು ದ್ವಿಚಕ್ರ ವಾಹನ ಬಂದ ಶಬ್ದಕ್ಕೆ ಹೆದರಿ ಅಲ್ಲಿಂದ  ಕಳ್ಳರು ಪರಾರಿಯಾದರು ಎಂದು ಒಡವೆ ಕಳೆದುಕೊಂಡ  ಸಿದ್ದರಾಜಮ್ಮ ಹೇಳಿದ್ದಾರೆ. ಈ ಸರಗಳ್ಳರು ದೃಢಕಾಯದವರಾಗಿದ್ದು ತಲೆಗೆ ಇಬ್ಬರೂ ಹೆಲ್ಮೆಟ್ ಧರಿಸಿದ್ದು ಮೈಮೇಲೆ  ಕಪ್ಪು ಬಣ್ಣದ ಜರ್ಕಿನ್ ಧರಿಸಿಕೊಂಡು ಗುರುತು ಸಿಗದಂತೆ ಮುಖ ಮುಚ್ಚಿಕೊಂಡಿದ್ದರು ಮತ್ತು ಕನ್ನಡದಲ್ಲಿಯೇ ಮಾತನಾಡುತ್ತಿದ್ದರು ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿರುವ ಒಂಟಿ ಮನೆಗಳು ಮತ್ತು ದಾರಿಯಲ್ಲಿನ ಒಂಟಿ ಪ್ರಯಾಣಿಕರು ಈ ಸರಗಳ್ಳರ ಟಾರ್ಗೆಟ್ ಆಗುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement