ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪೋಷಕರು ಕೇವಲ ಶಿಕ್ಷಣ ಶುಲ್ಕ ಪಾವತಿಗೇ ಸೀಮಿತವಾಗಬಾರದು

Rashmi Kasaragodu
Updated On : 14 Jun 2013, 1:13 am

ಚಿಕ್ಕಬಳ್ಳಾಪುರ: ತಂದೆ- ತಾಯಿಗಳಿಂದಲೇ ಮಕ್ಕಳಿಗೆ ಮೊದಲು ನಿಜವಾದ ಶಿಕ್ಷಣ ದೊರೆಯುವುದು. ಈ ಹಿನ್ನೆಲೆಯಲ್ಲಿ ಶಾಲೆಗೆ ಬಂದು ಕೇವಲ ಶುಲ್ಕ ಕಟ್ಟುವುದಕ್ಕೆ ಮಾತ್ರ ಪೋಷಕರು ಸೀಮಿತವಾಗಬಾರದು. ಗುಣಮಟ್ಟದ ಶಿಕ್ಷಣವನ್ನು ಕೊಡಿಸುವಲ್ಲಿ ಆದರ್ಶ ಮೆರೆಯಬೇಕು ಎಂದು ಆದಿಚುಂಚನಗಿರಿಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.
ತಾಲೂಕಿನ ಅಗಲಗುರ್ಕಿಯ ಬಿಜಿಎಸ್ ವರ್ಲ್ಡ್ ಸ್ಕೂಲ್‌ನಲ್ಲಿ ಆಯೋಜಿಸಿದ್ದ ಜ್ಞಾನಾಂಕುರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಮಕ್ಕಳಿಗೆ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಪೋಷಕರ ಜವಾಬ್ದಾರಿ ಒತ್ತಿ ಹೇಳಿದರು. ಸ್ವಯಂ ಮೊದಲು ಅಕ್ಕಿಯಲ್ಲಿ ಓಂ ಬರೆಸಿ ಮಕ್ಕಳ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿದರು.
ಆಧುನಿಕ ಭರಾಟೆಯಲ್ಲಿ ಸಂಸ್ಕೃತಿ ಮರೆಯುವುದು ಸಲ್ಲದು.  ಈ ನಿಟ್ಟಿನಲ್ಲಿ ಸಂಸ್ಕೃತಿ ಉಳಿಸಿ ಬೆಳೆಸಲು ಅರಿವು ಮೂಡಿಸಬೇಕು. ಈಗ ಪೋಷಕರು ಶಾಲೆಗೆ ಬಂದು ಶುಲ್ಕ ಕಟ್ಟುವುದಕ್ಕೆ ಮಾತ್ರ ಸೀಮಿತವಾಗುತ್ತಿದ್ದಾರೆ. ತದ ನಂತರ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡುವಲ್ಲಿ ಸಮರ್ಪಕವಾಗಿ ಜವಾಬ್ದಾರಿ ನಿರ್ವಹಿಸುವಲ್ಲಿ ನಿರ್ಲಕ್ಷ್ಯವನ್ನು ವಹಿಸುತ್ತಿದ್ದಾರೆ. ಇಂತಹ ಭಾವನೆ ದೂರವಾಗಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಅದಿಚುಂಚನಗಿರಿ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ, ಜಿಲ್ಲಾಧಿಕಾರಿ ವಿಶಾಲ್, ಪ್ರೊ. ಶಿವರಾಮರೆಡ್ಡಿ, ಮುಖಂಡರಾದ ಕೆ.ಪಿ.ಶ್ರೀನಿವಾಸ ಮೂರ್ತಿ, ಜಿ.ಆರ್. ನಾರಾಯಣಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement