ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರಿಯಾಯಿತಿ ದರದಲ್ಲಿ ನೀಡುವ ಸವಲತ್ತು ಸದ್ಬಳಕೆ ಮಾಡಿಕೊಳ್ಳಿ

Rashmi Kasaragodu
Updated On : 14 Jun 2013, 12:28 pm

ಕ.ಪ್ರ. ವಾರ್ತೆ   ಮಾಗಡಿ   ಜೂ.13
ಇಲಾಖೆಗಳು ರಿಯಾಯಿತಿ ದರದಲ್ಲಿ ನೀಡುವ ಬಿತ್ತನೆ ಬೀಜ, ಯಂತ್ರೋಪಕರಣ ಮತ್ತು ಕೃಷಿ ಪರಿಕರಗಳನ್ನು ಹಾಗೂ ಸೌಲತ್ತುಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಎಚ್.ಕೃಷ್ಣಮೂರ್ತಿ ಕರೆ ನೀಡಿದರು.
 ಅವರು ಮಾಗಡಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕೃಷಿಕ ಸಮಾಜ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಇಲಾಖೆಗಳು ನೀಡುವ ತಾಂತ್ರಿಕತೆಯನ್ನು ರೈತರು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು. ಕೃಷಿ ಇಲಾಖೆ ಅಗತ್ಯ ಬಿತ್ತನೆ ಬೀಜಗಳನ್ನು ಈಗಾಗಲೇ ಸಂಗ್ರಹ ಮಾಡಿಕೊಂಡಿದ್ದು, ರೈತರಿಗೆ ವಿತರಿಸುತ್ತಿದೆ. ಕೃಷಿ ಇಲಾಖೆಗೆ ಅವಲಂಬಿತ ವಿವಿಧ ಇಲಾಖೆಗಳನ್ನು ಸಹ ತಮ್ಮ ಇಲಾಖಾ ಯೋಜನೆಗಳನ್ನು ರೈತರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಕಳೆದ ಬಾರಿ ತಾಲೂಕಿನಲ್ಲಿ ಸಮರ್ಪಕವಾಗಿ ಮಳೆಯಾಗದೆ ರೈತರು ಬರದಿಂದ ತತ್ತರಿಸಿದ್ದು, ಅವರಿಗೆ ಬರಪರಿಹಾರ ನಿಧಿ ಯೋಜನೆಯಡಿ 1 ಸಾವಿರ ರು. ಚೆಕ್ಕನ್ನು ಪರಿಹಾರವಾಗಿ ನೀಡುತ್ತಿದೆ. ಈ ವರ್ಷ ವರುಣ ಕೃಪೆ ತೋರಿದ್ದು, ಮುಂಗಾರು ಚುರುಕುಗೊಂಡಿದೆ.   ರೈತರು ಸಕಾಲಕ್ಕೆ ಇಲಾಖೆ ಸೌಲತ್ತುಗಳನ್ನು ಪಡೆದುಕೊಂಡು ಸಕಾಲಕ್ಕೆ ಬಿತ್ತನೆ ಮಾಡಿ ಉತ್ತಮ ಫಸಲು ಪಡೆಯಲು ಶ್ರಮಿಸಬೇಕು ಎಂದರು.
ಸಹಾಯಕ ಕೃಷಿ ನಿರ್ದೇಶಕ ಎಚ್.ಸಿ. ಕೃಷ್ಣಪ್ಪ ಇಲಾಖಾ ಸೌಲತ್ತುಗಳು ಹಾಗು ಯೋಜನೆ ಮಹತ್ವದ ಮಾಹಿತಿ ನೀಡಿದರು.
ವಿತರಣೆ: ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ. ರಾಜಶೇಖರ್ ಮಾತನಾಡಿ ಹೈನುಗಾರಿಕೆಯ ಅಭಿವೃದ್ಧಿಯ ಹಿತದೃಷ್ಟಿಯಿಂದ  ಈಗಾಗಲೇ 5600 ಪ್ಯಾಕೆಟ್ ಮೇವಿನ ಬೀಜ ಸಂಗ್ರಹ ಮಾಡಿಕೊಂಡಿದ್ದು, ಇಲಾಖೆ ವತಿಯಿಂದ  ಬೀಜ ವಿತರಣೆ ಮಾಡಲಾಗುತ್ತಿದೆ. ಕುರಿ ಮಂಡಲಿ ಪುನಶ್ಚೇನಕ್ಕೆ ಮಂಡಲಿ ಅಧ್ಯಕ್ಷರು, ಪದಾಧಿಕಾರಿಗಳು ಮಂದಾಗಬೇಕು. ವಿಶೇಷ ಯೋಜನೆಯಡಿ ಕುರಿ ಸಾಕಾಣಿಕೆಗೆ ಅಗತ್ಯ ಕ್ರಮ ವಹಿಸಿದ್ದು, ರಿಯಾಯಿತಿ ದರದಲ್ಲಿ ಕುರಿ ಮರಿ ನೀಡಲಾಗುವುದು. ಆಸಕ್ತ ಯುವಕರು ಹಂದಿ ಸಾಕಾಣಿಕೆಗೆ ಮುಂದೆ ಬಂದರೆ ಹೆಚ್ಚಿನ ಆದ್ಯತೆ ನೀಡಲಾಗುವುದು. ರೈತರು ತಮ್ಮ ರಾಸುಗಳ ಭದ್ರತೆಗಾಗಿ  ಶೇ.50-60  ಯಂತೆ ವಿಮೆ  ಮಾಡಿಸಿಕೊಳ್ಳಬಹದು. ಹಸುಗಳು ಆಕಸ್ಮಿಕವಾಗಿ ಮರಣ ಹೊಂದಿದರೆ ಕೇವಲ 30 ದಿನದೊಳಗಾಗಿ ವಿಮೆ ಕಂತನ್ನು ನೀಡಲಾಗುತ್ತಿದೆ. ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
1.60 ಲಕ್ಷ ಸಸಿ: ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಕೃಷಿಯಲ್ಲಿ ಅರಣ್ಯಿಕರಣಗೊಳಿಸಿಕೊಳ್ಳಲು  1.60 ಲಕ್ಷ ಸಸಿ ಬೆಳಸಲಾಗಿದೆ. ಪ್ರತಿ ಪಂಚಾಯ್ತಿಗೆ 5 ಸಾವಿರ ಸಸಿ ವಿತರಣೆಗೆ ಕ್ರಮ ಕೈಗೊಂಡಿದ್ದೇವೆ. ಪಪ್ಪಾಯ ಸಸಿ ಸಹ ಬೆಳಸಿದ್ದೇವೆ. ಈ ಸಂಬಂಧ ಸಿಲ್ವರ್, ತೇಗ, ಬಿದಿರು, ಬೇವು, ಪಪ್ಪಾಯಿ ಸಸಿಗಳನ್ನು ವಿತರಣೆ ಮಾಡಲಾಗುವುದು ಎಂದು ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ರಾಕೇಶ್ ತಿಳಿಸಿದರು.
ತೋಟಗಾರಿಕೆ ಸಹಾಯಕ ನಿರ್ದೇಶಕಿ ಕೆ.ಎನ್. ರೂಪಶ್ರೀ ಮಾತನಾಡಿ ಎನ್.ಎಚ್.ಎಂ ಯೋಜನೆಯಡಿ ಹೊಸ ಪ್ರದೇಶ  ವಿಸ್ತರಣೆ ಇಲ್ಲ ಎಂದರು.
ಆತ್ಮ ಯೋಜನೆಯ ಉಪನಿರ್ದೇಶಕ ಎಚ್.ವಿ. ಜನಾರ್ದನ್, ರೇಷ್ಮೆ ಇಲಾಖೆಯ ಹರೀಶ್  ಇತರರು ಇಲಾಖೆಗಳ ಯೋಜನೆಗಳ ಮಾಹಿತಿ ನೀಡಿದರು. ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಕೆ.ಟಿ. ರಾಧಾಕೃಷ್ಣೇಗೌಡ, ಕೃಷಿಕ ಸಮಾಜದ ತಾಲೂಕು  ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ಮಾರೇಗೌಡ, ಪದಾಧಿಕಾರಿಗಳಾದ ಶಿವಣ್ಣ, ದೇವರಾಜಯ್ಯ, ಶಿವಣ್ಣ, ತಿಮ್ಮಹನುಮಯ್ಯ, ರವಿ, ಗೋವಿಂದಪ್ಪ, ಕೃಷಿ ಅಧಿಕಾರಿ ಆನಂದ್, ಪರಮಶಿವಯ್ಯ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement