ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

24 ರಿಂದ ಸೈನಿಕರ ಹುದ್ದೆ ಭರ್ತಿ

Rashmi Kasaragodu
Updated On : 15 Jun 2013, 12:09 pm

ರಾಮನಗರ: ಯುನಿಟೆಡ್ ಹೆಡ್ ಕ್ವಾರ್ಟರ್ ಕೋಟ ಭರ್ತಿ ಮಾಡಲು ಎಎಂಸಿ ಸೆಂಟರ್ ಮತ್ತು ಕಾಲೇಜು ಲಖ್ನೋದಲ್ಲಿ ಜೂ.24ರಿಂದ ಸೈನಿಕರ, ಮಾಜಿ ಸೈನಿಕರ ಯುದ್ಧ ವಿಧವೆಯರ, ವಿಧವೆಯರ ಮಕ್ಕಳು ಹಾಗೂ ಸೇವಾನಿರತ ಸೈನಿಕರ ಸ್ವಂತ ತಮ್ಮಂದಿರ ಭರ್ತಿ ನಡೆಯಲಿದೆ. ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಈ ಭರ್ತಿಯ ಸದುಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ದೂ.080-25588714 ಸಂಪರ್ಕಿಸಬಹುದು ಎಂದು ಬೆಂಗಳೂರು ಗ್ರಾಮಾಂತರದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
ರುಡ್‌ಸೆಟ್‌ನಿಂದ
ವಿವಿಧ ತರಬೇತಿ
ರಾಮನಗರ: ನೆಲಮಂಗಲ ತಾಲೂಕಿನ ಅರಿಶಿನಕುಂಟೆಯ ರುಡ್‌ಸೆಟ್ ಸಂಸ್ಥೆಯು ಬೆಂಗಳೂರು ಗ್ರಾಮಾಂತರ, ನಗರ, ರಾಮನಗರ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಯ ನಿರುದ್ಯೋಗಿ ಯುವಕ, ಯುವತಿಯರಿಗೆ ಉಚಿತವಾಗಿ ಮೊಬೈಲ್ ಸರ್ವಿಸ್  ತರಬೇತಿ(30 ದಿನಗಳು), ಕಂಪ್ಯೂಟರ್ ಟ್ಯಾಲಿ ತರಬೇತಿ(30 ದಿನಗಳು), ಗೃಹೋಪಯೋಗಿ ವಿದ್ಯುತ್ ಉಪಕರಣ ದುರಸ್ತಿ, ತರಬೇತಿ (30 ದಿನಗಳು ಯುವಕರಿಗಾಗಿ), ದ್ವಿಚಕ್ರ ವಾಹನ ರಿಪೇರಿ ತರಬೇತಿ(ಯುವಕರಿಗೆ 30 ದಿನಗಳು), ಸಿದ್ಧ ಉಡುಪು ತಯಾರಿಕೆ ತರಬೇತಿ(ಯುವತಿಯರಿಗೆ 21 ದಿನಗಳು), ಎಂಬ್ರಾಯಿಡರಿ ಮತ್ತು ಫ್ಯಾಬ್ರಿಕ್ ಕೇಂಟಿಂಗ್ ತರಬೇತಿ (ಯುವತಿಯರಿಗೆ 15 ದಿನಗಳು), ಬ್ಯೂಟಿಷಿಯನ್ ತರಬೇತಿ(ಯುವತಿಯರಿಗೆ 30 ದಿನಗಳು), ಲೈಟಿಂಗ್ ತರಬೇತಿ(30 ದಿನಗಳು ಯುವಕ, ಯುವತಿಯರಿಗಾಗಿ), ಹೈನುಗಾರಿಕೆ ಮತ್ತು ಎರೆಹಳು ಗೊಬ್ಬರ ತಯಾರಿಕೆ ತರಬೇತಿ(10 ದಿನಗಳು ಯುವಕ, ಯುವತಿಯರಿಗಾಗಿ)ಗಳನ್ನು ಹಮ್ಮಿಕೊಳ್ಳಲಾಗಿದೆ. 18 ರಿಂದ 45 ವರ್ಷದೊಳಗಿನ, ಕನ್ನಡ ಓದಲು ಬರೆಯಲು ಬಲ್ಲ ಆಸಕ್ತ ಅಭ್ಯರ್ಥಿಗಳು ತರಬೇತಿಗಾಗಿ ನಿರ್ದೇಶಕರು, ರುಡ್ ಸೆಟ್‌ಸಂಸ್ಥೆ, ಅರಿಶಿನಕುಂಟೆ-ಅಂಚೆ, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾ.ಜಿಲ್ಲೆ, ಈ ವಿಳಾಸಕ್ಕೆ ಸಲ್ಲಿಸಬಹುದು. ದೂ.080-27728166 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement