ಕಂಪ್ಯೂಟರ್ ತರಬೇತಿ
ರಾಮನಗರ: ನೆಲಮಂಗಲ ತಾಲೂಕಿನ ಅರಿಶಿನಕುಂಟೆ ರುಡ್ಸೆಟ್ ಸಂಸ್ಥೆಯು ಬೆಂಗಳೂರು ಗ್ರಾಮಾಂತರ, ನಗರ, ರಾಮನಗರ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಯ ನಿರುದ್ಯೋಗಿ ಯುವಕ, ಯುವತಿಯರಿಗಾಗಿ 2013ರ ಜುಲೈ ತಿಂಗಳಲ್ಲಿ ಕಂಪ್ಯೂಟರ್ ಡಿಟಿಪಿ ತರಬೇತಿ ನೀಡಲಿದೆ. 18 ರಿಂದ 45 ವರ್ಷದೊಳಗಿನ ಕನ್ನಡ ಓದಲು ಬರೆಯಲು ಬಲ್ಲ ಆಸಕ್ತ ಅಭ್ಯರ್ಥಿಗಳು ಜೂ.19ರಂದು ಬೆಳಗ್ಗೆ 11ಕ್ಕೆ ನಿರ್ದೇಶಕರು, ರುಡ್ಸೆಟ್ ಸಂಸ್ಥೆ, ಅರಿಶಿನಕುಂಟೆ ಅಂಚೆ, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಇಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ದೂ. 080-27728166 ಸಂಪರ್ಕಿಸಬಹುದು.