ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಗ್ರಾಮೀಣರ ಸಮಸ್ಯೆಗೆ ಪ್ರಾಮಾಣಿಕವಾಗಿ ಸ್ಪಂದಿಸುವೆ: ಬಾಲಕೃಷ್ಣ

Rashmi Kasaragodu
Updated On : 15 Jun 2013, 12:11 pm

ಮಾಗಡಿ: ದೇವಸ್ಥಾನ ನಿರ್ಮಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ  ಭರವಸೆ ನೀಡಿದರು. ತಾಲೂಕಿನ ಕಲ್ಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾಯನಾಯಕನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮ ಸಂದರ್ಶನದಲ್ಲಿ ಮಾತನಾಡಿ,  ಹಾರ ತುರಾಯಿ ಸ್ವೀಕರಿಸುವುದಿಲ್ಲ, ನಿಮ್ಮ ಪ್ರೀತಿ, ವಿಶ್ವಾಸವಷ್ಟೆ, ನಾನು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದೇನೆ ಎಂದರು. ನಾನು ನಿಮ್ಮ ಮನೆಯ ಮಗನಂತಿದ್ದೇನೆ. ನಿಮ್ಮ ಸಮಸ್ಯಗಳಿಗೆ ಸದಾ ಸ್ಪಂದಿಸುವ ಮನೋಭಾವ ಹೊಂದಿದ್ದೇನೆ. ಗ್ರಾಮೀಣ ಭಾಗದ ಜನತೆಗೆ ಕುಡಿಯುವ ನೀರು, ಸೂರು,ರಸ್ತೆ, ಸಮುದಾಯ ಭವನ, ಅಂಗನವಾಡಿ, ಶಾಲೆ, ದೇವಸ್ಥಾನ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ನೀಡಿದ್ದೇನೆ. ಗ್ರಾಮದಲ್ಲಿ ಸಮಸ್ಯೆಗಳಿದ್ದರೆ ನೇರವಾಗಿ ನನ್ನೊಂದಿಗೆ ಚರ್ಚಿಸಿ ಎಂದು ಗ್ರಾಮ ಜನರಲ್ಲಿ ನೇರವಾಗಿ ಜನರೊಂದಿಗೆ ಬೆರತು ಮನದಾಳದ ಮಾತುಗಳನ್ನು  ಗ್ರಾಮ ಸಂದರ್ಶನದಲ್ಲಿ  ಬಿಚ್ಚಿಟ್ಟರು.  ಇದೇ ವೇಳ ನೂರಾರು ಮಹಿಳೆಯರು ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಆಶ್ರಯ ಯೋಜನೆಯಡಿ ಮನೆ ಕೊಡುವಂತೆ ಶಾಸಕ ಎಚ್.ಸಿ.ಬಾಲಕೃಷ್ಣ ಅವರಲ್ಲಿ ಮನವಿ ಮಾಡಿದರು. ಬಡವರಿಗಾಗಿ ಸೂರು ಇರುವುದು, ದುರುಪಯೋಗ ಬೇಡ, ಅರ್ಹ ಪಲಾನುಭವಿಗಳಿಗೆ ಲಾಟರಿ ಮೂಲಕ ಸೂರು ಹಂಚಿಕೆ ಮಾಡುವಂತೆ ಪಂಚಾಯ್ತಿ ಪಿಡಿಒಗಳಿಗೆ ಶಾಸಕ ಬಾಲಕೃಷ್ಣ ಸೂಚಿಸಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೆ.ಮುದ್ದುರಾಜ ಯಾದವ್, ತಾ.ಪಂ. ಅಧ್ಯಕ್ಷ ಬಿ.ಟಿ.ವೆಂಕಟೇಶ್, ಸದಸ್ಯರಾದ ಜಿ.ಕೃಷ್ಣ, ಅರುಂಧತಿ ಚಿಕ್ಕಣ್ಣ, ನಾರಾಯಣಪ್ಪ, ಮೂರ್ತಿ, ನಾಗರಾಜು, ತಾ.ಪಂ. ಇಓಕೆ.ಬಿ. ಅಕ್ಕೋಜಿ, ತಹಸೀಲ್ದಾರ್ ಡಾ.ಬಿ.ಆರ್. ಹರೀಶ್‌ನಾಯಕ್, ತೋಟಗಾರಿಕೆ ಸಹಾಯಕ ನಿರ್ದೇಶಕಿ ರೂಪಶ್ರೀ, ಸಿಡಿಪಿಓ ಕೆಂಪಣ್ಣ, ಲಕ್ಷ್ಮೀನಾರಾಯಣ್, ಜಯಶಂಕರ್, ಶ್ರೀನಿವಾಸ್, ಶಂಕರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement