ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಂಸ್ಕೃತಿ ಟ್ರಸ್ಟ್ ರಕ್ತದಾನ ಶಿಬಿರ; 60 ಬಾಟಲಿ ರಕ್ತ ಸಂಗ್ರಹ

Rashmi Kasaragodu
Updated On : 15 Jun 2013, 12:09 pm


ದೊಡ್ಡಬಳ್ಳಾಪುರ: ಪಟ್ಟಣದ ಸಂಸ್ಕೃತಿ ಟ್ರಸ್ಟ್ ನೇತೃತ್ವದಲ್ಲಿ 'ವಿಶ್ವ ರಕ್ತದಾನಿಗಳ ದಿನಾಚರಣೆ' ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಈ ನಿಟ್ಟಿನಲ್ಲಿ ದಾನಿಗಳಿಂದ 60 ಬಾಟಲ್ ರಕ್ತ ಸಂಗ್ರಹಿಸಿ ಬೆಂಗಳೂರಿನ ರಾಷ್ಟ್ರೋತ್ಥಾನ ರಕ್ತನಿಧಿಗೆ ನೀಡುವ ಮೂಲಕ ರಕ್ತದಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಬೆಂಗಳೂರಿನ ರಾಷ್ಟ್ರೋತ್ಥಾನ ರಕ್ತನಿಧಿ, ತಾಲೂಕು ಕಸಾಪ, ಕಜಾಪ, ತಾಲೂಕು ಸರ್ಕಾರಿ ನೌಕರರ ಸಂಘ, ಹಳ್ಳಿ ಜನಪದ ಮತ್ತಿತರ ಸಂಘಟನೆಗಳ ಸಹಯೋಗದಲ್ಲಿ ಶುಕ್ರವಾರ ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ರಕ್ತದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉಪ ವಿಭಾಗಾಧಿಕಾರಿ ಡಾ.ಮಹೇಶ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದಿನನಿತ್ಯ ನಡೆಯುತ್ತಿರುವ ಅಪಘಾತ, ದುರ್ಘಟನೆಗಳಲ್ಲಿ ಅನೇಕ ಮಂದಿಗೆ ರಕ್ತದ ಅನಿವಾರ್ಯತೆ ಇದೆ. ದಿನೇ ದಿನೇ ರಕ್ತದ ಬೇಡಿಕೆ ಹೆಚ್ಚುತ್ತಲೇ ಇದೆ ಎಂದರು.
ತಹಶೀಲ್ದಾರ್ ಚಂದ್ರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವರಾಜ್, ಸಂಸ್ಕೃತಿ ಟ್ರಸ್ಟ್‌ನ ಅಧ್ಯಕ್ಷ ಎಚ್.ಎಸ್.ನಾಗೇಶಾಚಾರ್, ಕಂದಾಯ ಅಧಿಕಾರಿ ರಜನಿಕಾಂತರೆಡ್ಡಿ, ತಾಲೂಕು ಕಸಾಪ ಅಧ್ಯಕ್ಷ ಕೆ.ಆರ್.ರವಿಕಿರಣ್, ಸಂಪತ್‌ಕುಮಾರ್, ಉಮಾಶಂಕರ್, ಮುರಾರಿ, ಬಸವರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement