1 ಕೋಟಿ ಬೆಲೆ ಬಾಳುವ ಗುಟ್ಕಾ ವಶ
ನೆಲಮಂಗಲ: ಪಟ್ಟಣದ ಸೊಂಡೆಕೊಪ್ಪ ಸರ್ಕಲ್ನ ಗೋಡೌನ್ವೊಂದರಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಸುಮಾರು 1 ಕೋಟಿ ಬೆಲೆ ಬಾಳುವ ಗುಟ್ಕಾವನ್ನು ತಹಸೀಲ್ದಾರ್ ಡಿ. ರಾಜೇಂದ್ರ ಶನಿವಾರ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಜಮೀನು ಒತ್ತುವರಿ ಮಾಡಿಕೊಂಡಿದ್ದನ್ನು ತೆರವುಗೊಳಿಸುತ್ತಿದ್ದಾಗ ಗೋದಾಮಿನಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಗುಟ್ಕಾಪುಡಿ ತುಂಬಿದ ಚೀಲ ಹಾಗೂ ಲೇಬಲ್ ಹೊಂದಿರುವ ಕವರ್ಗಳು ಪತ್ತೆಯಾಗಿವೆ. ಈ ಸಂಬಂಧವಾಗಿ ಪ್ರಕರಣ ದಾಖಲಾಗಿದೆ.