ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆ.3ರಿಂದ ಬೃಹತ್ ಉದ್ಯೋಗ ಮೇಳ: ವೀರಪ್ಪ ಮೊಯ್ಲಿ

Rashmi Kasaragodu
Updated On : 16 Jun 2013, 12:56 pm

ಚಿಕ್ಕಬಳ್ಳಾಪುರ:  ಜಿಲ್ಲೆಯ 3ನೇ ಬೃಹತ್ ಉದ್ಯೋಗ ಮೇಳ ಆ.3, 4ರಂದು ನಗರದ ಹೊರ ವಲಯದ ಎಸ್ಜೆಸಿಐಟಿ ಕಾಲೇಜಿನಲ್ಲಿ ನಡೆಯಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಡಾ. ಎಂ.ವೀರಪ್ಪ ಮೊಯ್ಲಿ ತಿಳಿಸಿದರು.
ಇಲ್ಲಿನ ಎಸ್ಜೆಸಿಐಟಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಉದ್ಯೋಗ ಮೇಳ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. 2011, 2013ರಲ್ಲಿ ಚಿಕ್ಕಬಳ್ಳಾಪುರಲ್ಲಿ ನಡೆದ ಉದ್ಯೋಗ ಮೇಳ ಬಹಳ ಯಶಸ್ವಿಯಾಗಿದೆ. 2011 ರಲ್ಲಿ ಸುಮಾರು 15,000 ಜನಕ್ಕೆ ಹಾಗೂ 2012ರಲ್ಲಿ 16,429 ಜನರಿಗೆ ಉದ್ಯೋಗ ದೊರೆತಿದೆ. ಆಗ ರಾಜ್ಯ ಪ್ರತಿಷ್ಠಿತ ಕಂಪೆನಿಗಳು ಮೇಳದಲ್ಲಿ ಭಾಗವಹಿಸಿದ್ದವು. ಈ ಬಾರಿ ಉದ್ಯೋಗ ಮೇಳದ ಐಟಿಐ ಉದ್ಯೋಗಾಂಕ್ಷಿಗಳಿಗೆ 8 ದಿನದ ತರಬೇತಿ ಹಾಗೂ ಇತರರಿಗೆ 2 ದಿನದ ವಿಶೇಷ ತರಬೇತಿ ನೀಡಲಾಗುವುದು ಎಂದರು. ಉದ್ಯೋಗ ಮೇಳ ಉದ್ಘಾಟನೆಗೆ ಮುಖ್ಯಮಂತ್ರಿಗಳು, ಉಸ್ತುವಾರಿ ಸಚಿವರು ಹಾಗೂ ಇತರ ಸಚಿವರನ್ನು ಆಹ್ವಾನಿಸಲಾಗುವುದು. ಈ ಉದ್ಯೋಗ ಮೇಳ ಅಭೂತಪೂರ್ವ ಯಶಸ್ಸು ಗಳಿಸಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು. ಸಭೆಯಲ್ಲಿ ರಾಜ್ಯ ಸಾರಿಗೆ ಮಂತ್ರಿ ರಾಮಲಿಂಗಾರೆಡ್ಡಿ, ಉದ್ಯೋಗ ವಿನಿಮಯ ಕೇಂದ್ರದ ಕಾರ್ಯದರ್ಶಿ ಪಂಕಜ್ ಪಾಂಡೆ, ಚಿಕ್ಕಬಳ್ಳಾಪುರ ಶಾಸಕ ಡಾ. ಕೆ.ಸುಧಾಕರ್, ಜಿಪಂ ಅಧ್ಯಕ್ಷ ಚಿನ್ನಪ್ಪ, ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಸಿಇಓ ಶೇಖರಪ್ಪ, ಜಿಲ್ಲಾಧಿಕಾರಿ ಡಾ. ಆರ್.ವಿಶಾಲ್, ಎಸ್ಜೆಸಿಐಟಿಯ ಪ್ರಾಂಶುಪಾಲ ಮುನಿಕೆಂಚೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement