ಚಿನ್ನಾಭರಣ ಕಳವು: ದೂರು
ಹೋಸಕೋಟೆ: ಪಟ್ಟಣದಲ್ಲಿ ವಿನಾಯಕನಗರದ ಬಾಲಾಜಿಸಿಂಗ್ ಬಡಾವಣೆಯ ಮನೆಯಲ್ಲಿ ಚಿನ್ನಾಭರಣ ಕಳವಾದ ಬಗ್ಗೆ ದೂರು ದಾಖಲಿಸಲಾಗಿದೆ. ಬಡಾವಣೆಯ ವಾಸಿ ರಾಮಚಂದ್ರ ರಾವ್ ಅಸ್ವಸ್ಥರಾಗಿದ್ದು ಕೋಲಾರದ ಜಾಲಪ್ಪ ಆಸ್ಪತ್ರಗೆ ದಾಖಲಿಸಲಾಗಿತ್ತು. ಪತ್ನಿ, ಮಕ್ಕಳು ಅಲ್ಲಿಯೇ ಇದ್ದು ಶುಕ್ರವಾರ ಬೆಳಗ್ಗೆ ಮಗಳು ಹೇಮಾವತಿ ಮನೆಗೆ ಬಂದ ಸಂದರ್ಭದಲ್ಲಿ ಮುಂಬಾಗಿಲು ತೆರೆದಿರುವುದು ಕಂಡುಬಂದಿದೆ. ನಂತರ ಪರಿಶೀಲಿಸಿದಾಗ ಉಕ್ಕಿನ ಕಪಾಟಿನಲ್ಲಿಟ್ಟಿದ್ದ ಸುಮಾರು 3ಲಕ್ಷ ರು.ಗಳ ಮೌಲ್ಯದ ಚಿನ್ನಾಭರಣಗಳು ಕಳವಾಗಿರುವುದು ಕಂಡುಬಂದಿದೆ. ಈ ಬಗ್ಗೆ ಎಸ್. ಗಾಯಿತ್ರಿಬಾಯಿ ನೀಡಿರುವ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.