ತೇಜಸ್ವಿ; ಮಲೆನಾಡಿನ ಸಮಸ್ಯೆಗಳ ಧ್ವನಿ
ಬೆಂಗಳೂರು: ಕಾಫಿ ಮುಕ್ತ ಮಾರುಕಟ್ಟೆಗೆ ನಿಜವಾಗಿ ಕಾರಣಕರ್ತರಾದ ಏಕೈಕ ವ್ಯಕ್ತಿಯೆಂದರೆ ಪೂರ್ಣಚಂದ್ರ ತೇಜಸ್ವಿ. ಅವರು ಕಾಫಿ ಬೆಳೆಗಾರರ ಹಿತಕ್ಕಾಗಿ ಸಾಕಷ್ಟು ಹೋರಾಟ ಮಾಡಿದ್ದರು ಎಂದು ಮಾಜಿ ಸಭಾಪತಿ, ಚಿತ್ರಕಲಾಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್ ಹೇಳಿದ್ದಾರೆ.
ಟೋಟಲ್ ಕನ್ನಡದಿಂದ ಶನಿವಾರ ಹಮ್ಮಿಕೊಂಡಿದ್ದ 'ಮತ್ತೆ ಮತ್ತೆ ತೇಜಸ್ವಿ' ಸಾಕ್ಷ್ಯಚಿತ್ರದ ಡಿವಿಡಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಇಂದಿನ ಪರಿಸ್ಥಿತಿಯಲ್ಲಿ ನಮಗೆಲ್ಲಾ ತೇಜಸ್ವಿ ಅವರ ಅವಶ್ಯಕತೆ ಇದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಮಾತನಾಡುತ್ತಿದ್ದ ಅವರು ಮಲೆನಾಡಿನ ಸಮಸ್ಯೆಗಳಿಗೆ ದನಿಯಾಗುತ್ತಿದ್ದರು. ಬೆಳೆಗಾರರು, ಕೃಷಿಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾ ನಿಷ್ಠುರವಾಗಿ ಮಾತನಾಡುತ್ತಿದ್ದರು ಎಂದು ಹೇಳಿದರು. ನಾನು ಕಾಲೇಜಿನಲ್ಲಿ, ವಿಶ್ವವಿದ್ಯಾನಿಲಯದಲ್ಲಿ ಕಲಿಯುವುದಕ್ಕಿಂತ ಅಧಿಕ ವಿಚಾರಗಳನ್ನು ಕಲಿತಿದ್ದೇನೆ ಎಂದರು.