ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಸವೇಶ್ವರ ನಗರ ಗ್ರಾಮ ಶಾಖೆ ಇಂದು ಉದ್ಘಾಟನೆ

Rashmi Kasaragodu
Updated On : 16 Jun 2013, 12:54 pm

ನೆಲಮಂಗಲ: ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರೊ.ಬಿ.ಕೆ ಕೃಷ್ಣಪ್ಪರವರ 75ನೇ ವರ್ಷದ ಜನ್ಮದಿನದ ಅಂಗವಾಗಿ  ಜೂನ್ 16ರಂದು ಬೆಳಿಗ್ಗೆ 10-30ಕ್ಕೆ ಬಸವೇಶ್ವರನಗರ ಗ್ರಾಮ ಶಾಖೆ ಉದ್ಘಾಟನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಸಂಚಾಲಕ ಎನ್.ಗಿರಿಯಪ್ಪ  ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ವೃತ್ತ ಆರಕ್ಷಕ ನಿರೀಕ್ಷಕ ಡಾ.ಪ್ರಕಾಶ್, ದಲಿತ ಸಂಘರ್ಷ ಸಮಿತಿಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಮಪ್ಪ, ಜಿಲ್ಲಾ ಸಂಚಾಲಕ  ಬರದಿ ಹನುಮಂತರಾಯಪ್ಪ, ಹಿರಿಯ ಮುಖಂಡರಾದ ಗಂಗಹನುಮಯ್ಯ, ಎಸ್. ಮರಿಸ್ವಾಮಿ ಶಿಲ್ಪಿ ದಂಡುವಯ್ಯ, ದಾಸನಪುರ ಮಾಜಿ ಪಂಚಾಯ್ತಿ ಅಧ್ಯಕ್ಷ ಬೈಲಾಂಜಿನಪ್ಪ, ತಾ.ಪಂ.ಸದಸ್ಯ ವೀರಣ್ಣ, ಸಿದ್ದಗಂಗಯ್ಯ, ಗ್ರಾ.ಪಂ.ಸದಸ್ಯ ರಾಮಕೃಷ್ಣಯ್ಯ, ಜನಾಂಗದ ದಂಡೋರ ಅಧ್ಯಕ್ಷ ರವಿಚಂದ್ರ ಆಗಮಿಸಲಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಎಚ್.ಎಂ.ರಾಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement