ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆಧುನಿಕತೆ ಸೋಗಿನಲ್ಲಿ ನಶಿಸುತ್ತಿದೆ ಜನಪದ ಕಲೆ, ಸಂಸ್ಕೃತಿ: ರುದ್ರಪ್ಪ

Rashmi Kasaragodu
Updated On : 17 Jun 2013, 11:41 am

ನೆಲಮಂಗಲ: ಆಧುನಿಕತೆಯ ಸೋಗಿನಲ್ಲಿ ಜಾನಪದ ಕಲೆ, ಸಂಸ್ಕೃತಿ ನಶಿಸುತ್ತಿರುವುದು ವಿಷಾದನೀಯ ಎಂದು ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ರುದ್ರಪ್ಪ ತಿಳಿಸಿದರು. ಅವರು ಭಾನುವಾರ ಪಟ್ಟಣದ ಸದಾಶಿವನಗರದ ರಂಗ ಶಿಕ್ಷಣ ಸಭಾಂಗಣದಲ್ಲಿ ಅಂಜನಾದ್ರಿ ಕಲಾನಿಕೇತನ ಟ್ರಸ್ಟ್ ಅನ್ನು  ಉದ್ಘಾಟಿಸಿ  ಮಾತನಾಡುತ್ತಾ ಜಾನಪದ ಕಲೆಯ ಸೊಗಡು ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಾಗಿದೆ. ಆದರೆ ಯುವಕರು ದೃಶ್ಯ ಮಾಧ್ಯಮಗಳತ್ತ ಆಸಕ್ತಿ ತೋರಿ ಜಾನಪದ ಕಲೆಗಳು ಅವನತಿಯ ಅಂಚಿನಲ್ಲಿವೆ. ಆದ್ದರಿಂದ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಸಂಘ ಸಂಸ್ಥೆಗಳು ಹೆಚ್ಚಿನ ಶ್ರಮ ವಹಿಸಬೇಕು ಎಂದು ಹೇಳಿದರು.
ರಂಗ ಶಿಕ್ಷಣ ಕೇಂದ್ರ ಸಿದ್ದರಾಜು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ  ನೂತನ ಟ್ರಸ್ಟ್‌ನ ಸಂಸ್ಥಾಪಕರಾದ ಜಿ.ಎನ್. ಕನಕರಾಜು ಸುಮಾರು ವರ್ಷಗಳಿಂದ ರಂಗಭೂಮಿ ಕಲಾವಿದರಾಗಿ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಂಸ್ಥೆಯೊಂದನ್ನು ಕಟ್ಟಿರುವುದು ಅಭಿನಂದನಾರ್ಹ ವಿಚಾರವೆಂದರು. ವೇದಿಕೆಯಲ್ಲಿ  ಸಂಸ್ಥಾಪಕ ಅಧ್ಯಕ್ಷ ಎಚ್.ದಿನೇಶ್, ಅಧ್ಯಾಪಕ ಗಂಗರಾಜು, ಪ್ರಾಂಶುಪಾಲ ನೆಗಳೂರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement