ಕಾರ್ಮಿಕ ವಿರೋಧಿ ಧೋರಣೆಗೆ ಖಂಡನೆ
ಹೊಸಕೋಟೆ: ತಾಲೂಕಿನ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶ ಹಾಗೂ ಇನ್ನಿತರೆ ಸ್ಥಳಗಳಲ್ಲಿ ಇರುವ ಕಾರ್ಖಾನೆಗಳಲ್ಲಿ ಮಾಲೀಕರು ಹಾಗೂ ಸ್ಥಳೀಯ ಪ್ರಭಾವಶಾಲಿ ವ್ಯಕ್ತಿಗಳು ನಿರಂತರವಾಗಿ ಶೋಷಣೆ ನಡೆಸುತ್ತಿರುವುದನ್ನು ತಾಲೂಕು ಸಿಐಟಿಯು ಅಧ್ಯಕ್ಷ ಹರೀಂದ್ರ ಖಂಡಿಸಿದ್ದಾರೆ. ಅವರು ಇಲ್ಲಿನ ತಾಲೂಕು ಕಚೇರಿ ಮುಂಭಾಗ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಕಾಯಂ ಕಾರ್ಮಿಕರಿಗೆ ಸರಕಾರ ನಿಗದಿಪಡಿಸಿರುವ ಕಾನೂನಿನನ್ವಯ ಸೌಲಭ್ಯಗಳನ್ನು ಸಹ ಒದಗಿಸುವಲ್ಲಿ ಆಡಳಿತ ವರ್ಗ ವಿಫಲವಾಗಿದ್ದು, ಗುತ್ತಿಗೆ ಆಧಾರದ ಮೇಲೆ ನೇಮಿಸಿ ಕೊಂಡಿರುವವರು ಸಹ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.