ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬನ್ನೇರುಘಟ್ಟಕ್ಕೆ ಇಂದು ಡಿಸಿ ಭೇಟಿ

Rashmi Kasaragodu
Updated On : 17 Jun 2013, 12:49 pm

ಆನೇಕಲ್ಲು: ಬೆಂಗಳೂರು ನಗರ ಜಿಲ್ಲಾಧಿಕಾರಿ ಡಾ. ಪ್ರಕಾಶ್ ಅವರು ಜೂ.17 ಸೋಮವಾರ ಬೆಳಗ್ಗೆ 10 ಗಂಟೆಗೆ ಬನ್ನೇರುಘಟ್ಟಕ್ಕೆ ಭೇಟಿ ನೀಡಲಿದ್ದು ಕಂದಾಯ ಇಲಾಖೆಗಳ ದಾಖಲಾತಿಗಳನ್ನು ಪರಿಶೀಲಿಸಲಿದ್ದಾರೆ. ನಕಲಿ ದಾಖಲೆ, ಪಂಚಾಯ್ತಿ ವತಿಯಿಂದ ನಿವೇಶನಗಳಿಗಾಗಿ ನೀಡಿದ ಫಾರಂ 9-10 ರ ಪರಿಶೀಲನೆ ಜೊತೆಗೆ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ರೈತ ಬಂಧುಗಳು ತಮ್ಮ ಸಮಸ್ಯೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ಅವಕಾಶವಿದೆ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಹಾರಗದ್ದೆ ಸಾಹಿತ್ಯ ಸಮ್ಮೇಳನ ಸಭೆ
ಆನೇಕಲ್ಲು: ಜೂ. 22-23ರಂದು ನಡೆಯಲಿರುವ ಹಾರಗದ್ದೆ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಭಾವಿ ಸಭೆಯನ್ನು ಆನೇಕಲ್ ತಾಲೂಕು ಪಂಚಾಯ್ತಿ ಪ್ರಾಂಗಣದಲ್ಲಿ ಸೋಮವಾರ ಮದ್ಯಾಹ್ನ 3 ಗಂಟೆಗೆ  ಕರೆಯಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಎಚ್. ಎಸ್. ಬಸವರಾಜು ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ಗ್ರಾಮೀಣ ಭಾಗದಲ್ಲಿ ನಡೆಯುವ ಕನ್ನಡ ತೇರಿಗೆ ಬೇಕಾದ ಸಲಹೆ ಸೂಚನೆ ಮತ್ತು ಸಹಕಾರವನ್ನು ನಿರೀಕ್ಷಿಸಿದ್ದು ಸಂಘ ಸಂಸ್ಥೆಗಳ  ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಸಭೆಗೆ ಬರಲು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement