'ಸೈಟ್ ಕಾಪಾಡಲು ಸಾಹಸ ಪಡಬೇಕು'
ನೆಲಮಂಗಲ: ಬಡವರು ಕಷ್ಟಪಟ್ಟು ಹಣ ನೀಡಿ ನಿವೇಶನ ಕೊಂಡಿದ್ದರೂ ಸಹ ಅದನ್ನು ಉಳಿಸಿಕೊಳ್ಳುವಲ್ಲಿ ಹರಸಾಹಸ ಪರಿಸ್ಥಿತಿ ಬಂದಿದೆ ಎಂದು ನೊಂದ ನಿವೇಶನದಾರರಾದ ಬೈರೇಗೌಡ ಹೇಳಿದರು. ಅವರು ಪಟ್ಟಣದ ಪ್ರಸನ್ನಾಂಜನೇಯ ಟ್ರಸ್ಟ್‌ನ ಬಡಾವಣೆಯಲ್ಲಿ ನೊಂದ ನಿವೇಶನದಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿ ಕಳೆದ 20 ವರ್ಷಗಳ ಹಿಂದೆ ಸರ್ಕಾರವು ಸ್ವಾಧೀನಪಡಿಸಿಕೊಂಡ ಜಮೀನಿನಲ್ಲಿ ಕಾನೂನು ಬದ್ಧವಾಗಿ ನಿವೇಶನವನ್ನು ನಾವು ಕ್ರಮಬದ್ಧವಾಗಿ ಖರೀದಿಸಿ ಕ್ರಯಪತ್ರ ಮಾಡಿಸಿಕೊಂಡಿರುವುದಾಗಿ ತಿಳಿಸಿದರು. ನಾವು ನಿವೇಶನಗಳನ್ನು ಉಳಿಸಿಕೊಳ್ಳಲು ಕಾನೂನು ಹೋರಾಟ ಅತ್ಯಗತ್ಯ. ಈ ಬಡಾವಣೆಯಲ್ಲಿ ನಿವೇಶನ ಪಡೆದಿರುವ ಪ್ರತಿಯೊಬ್ಬರು ಒಗ್ಗೂಡಿ ಹೋರಾಟ ನಡೆಸಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಸಭೆಯಲ್ಲಿ ಚರ್ಚಿಸಿದರು. ಸಭೆಯಲ್ಲಿ ನಿವೇಶನದಾರರಾದ ಹನುಮಂತಪ್ಪ, ರಾಜಣ್ಣ, ಶಿವಣ್ಣ, ರುದ್ರೇಶ್ ಸೇರಿದಂತೆ ಬಡಾವಣೆ ನಿವೇಶನದಾರರು ಇದ್ದರು.