ಅತಿಮಹಾರುದ್ರ ಚಂಡಿಕಾಯಾಗ
ಕನಕಪುರ: ಕನಕಪುರದ ಬಸ್ ನಿಲ್ದಾಣದ ಸಮೀಪವಿರುವ ಶ್ರೀಕಾಳಿಕಾಂಬಾ ದೇವಾಲಯದಲ್ಲಿ ಅತಿಮಹಾರುದ್ರ ಚಂಡಿಕಾಯಾಗ ಕಾರ್ಯಕ್ರಮ ವೇದಬ್ರಹ್ಮ ಶ್ರೀ ಕೇಶವಮೂರ್ತಿ ಆಚಾರ್ಯ ನೇತೃತ್ವದಲ್ಲಿ ನಡೆಯಿತು. ಯಾಗವು ಭೈರವಿ ಜಗದೀಶ್, ನಾಗರಾಜು, ನಟರಾಜ್ ಅವರ ಸಹಯೋಗದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ಕೆ.ಪಿ.ತ್ಯಾಗರಾಜಮೂರ್ತಿ, ಮಾಜಿ ಅಧ್ಯಕ್ಷ ವೀರಭದ್ರಾಚಾರ್, ಕಾರ್ಯದರ್ಶಿ ಬಿ.ಎಂ. ನಾಗರಾಜು, ಚಿತ್ರನಟಿ ಜಯಂತಿ, ಮದರ್ ಥೆರೇಸಾ ಶಾಲೆಯ ಕಾರ್ಯದರ್ಶಿ ಲಕ್ಷ್ಮೀಶ್ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಂಗವಾಗಿ ಮೈಸೂರಿನ ಚಾಮುಂಡಿಬೆಟ್ಟದ ಚಾಮುಡೇಶ್ವರಿ ದೇವಾಲಯದ ಪಂಚಲೋಹದ ಚಾಮುಂಡಿ ವಿಗ್ರಹವನ್ನು ತಂದು ಪ್ರಾಣಪ್ರತಿಷ್ಠಾಪನೆ ನಡೆಸಿ, ಗಣಹೋಮ, ನವಗ್ರಹಹೋಮಗಳೊಂದಿಗೆ ಚಂಡಿಕಾಹೋಮವನ್ನು ನೆರವೇರಿಸಲಾಯಿತು. ಬಾಲಕ ಬಾಲಕಿಯರಿಂದ ಸಾಮೂಹಿಕ ಭಗವದ್ಗೀತಾ ಪಾರಾಯಣ ನಡೆಯಿತು.