ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಗೋ ರಕ್ಷಣೆ ನೀಡದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಲು ಪೇಜಾವರಶ್ರೀ ಆಗ್ರಹ

Rashmi Kasaragodu
Updated On : 18 Jun 2013, 12:13 pm

ದೇವನಹಳ್ಳಿ: ಬೆಂಗಳೂರಿನ ಪ್ರಾಣಿದಯಾಸಂಘದವರು ದೇವನಹಳ್ಳಿ ಬಳಿ ಎರಡು ವಾಹನಗಳಲ್ಲಿ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಅಕ್ರಮವಾಗಿ ಸಾಗಣೆಯಾಗುತ್ತಿದ್ದ  ಗೋವುಗಳನ್ನು ಠಾಣೆಗೆ ಒಪ್ಪಿಸಿದ್ದರೂ ಮತ್ತೆ ಕಟುಕರ ಪಾಲಾಗಿರುವುದಕ್ಕೆ ಪೇಜಾವರ ಶ್ರೀಗಳು ಖಂಡಿಸಿದ್ದಾರೆ.
ಗೋಹತ್ಯೆ ನಿಷೇಧ ಹಾಗೂ ಜಾನುವಾರು ಪ್ರತಿಬಂಧಕ ಕಾನೂನನ್ನು ಪರಿಪಾಲಿಸಬೇಕೆಂದು ಸಂಕಲ್ಪಿಸಿರುವ ಸರ್ಕಾರದ ನಿರ್ಣಯವನ್ನು  ಎಲ್ಲ ಗೋಪ್ರೇಮಿಗಳು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ. ಆದರೆ ಜೂ.14 ರಂದು ದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಮೊದಲು ಎಫ್‌ಐಆರ್ ದಾಖಲಿಸಲು ಹಿಂಜರಿದು ಕೊನೆಗೆ ತಾವೇ ದಾಖಲಿಸಿಕೊಂಡು ಕಸಾಯಿಖಾನೆಗೆ ಹೊರಟಿದ್ದ ವಾಹನಗಳನ್ನು ಹಾಗೂ ಅದರೊಳಗೆ ಅಮಾನವೀಯವಾಗಿ ತುಂಬಿದ್ದ ಗೋವುಗಳ ಸಮೇತ ಕಟುಕರಿಗೆ ರವಾನಿಸಿದ್ದಾರೆ.ಪ್ರಕರಣದ ತನಿಖೆ ಮುಗಿಯುವವರೆಗೂ ಅವರನ್ನು ಅಧಿಕಾರದಿಂದ ಅಮಾನತು ಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement