ಗೋವುಗಳಿಗೆ ರಕ್ಷಣೆ ನೀಡದ ಪೊಲೀಸರ ಮೇಲೆ ಕ್ರಮಕ್ಕೆ ಆಗ್ರಹ
ದೇವನಹಳ್ಳಿ: ಬೆಂಗಳೂರಿನ ಪ್ರಾಣಿದಯಾಸಂಘದವರು ದೇವನಹಳ್ಳಿ ಬಳಿ ಎರಡು ವಾಹನಗಳಲ್ಲಿ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಅಕ್ರಮವಾಗಿ ಸಾಗಣೆಯಾಗುತ್ತಿದ್ದ ಗೋವುಗಳನ್ನು ಠಾಣೆಗೆ ಒಪ್ಪಿಸಿದ್ದರೂ ಮತ್ತೆ ಕಟುಕರ ಪಾಲಾಗಿರುವುದಕ್ಕೆ ಪೇಜಾವರ ಶ್ರೀಗಳು ಖಂಡಿಸಿದ್ದಾರೆ. ಜೂ.14 ರಂದು ದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡು ಕಸಾಯಿಖಾನೆಗೆ ರವಾನಿಸಿದ್ದಾರೆ. ಈ ಪ್ರಕರಣದ ತನಿಖೆ ಮುಗಿಯುವವರೆಗೂ ಅವರನ್ನು ಅಧಿಕಾರದಿಂದ ಅಮಾನತು ಗೊಳಿಸಬೇಕೆಂದು ಸ್ವಾಮಿಜೀ ಆಗ್ರಹಿಸಿದ್ದಾರೆ.