ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಬಸ್
ಆನೇಕಲ್ಲು: ಚಾಲಕನ ನಿಯಂತ್ರಣ ತಪ್ಪಿದ ಬಸ್ ಒಂದು ರಸ್ತೆ ಬದಿಯ ಲೈಟ್ ಕಂಬಕ್ಕೆ ಗುದ್ದಿ ನಂತರ ಮನೆ ಗೋಡೆಗೂ ಡಿಕ್ಕಿ ಹೊಡೆದ ಘಟನೆ ಆನೇಕಲ್ ಠಾಣಾ ವ್ಯಾಪ್ತಿಯ ಬೆಸ್ತಮಾನಹಳ್ಳಿಯಲ್ಲಿ ನಡೆದಿದೆ. ಅತ್ತಿಬೆಲೆಯಿಂದ ಆನೇಕಲ್ಲಿಗೆ ಬರುತ್ತಿದ್ದು ಖಾಸಗಿ ಬಸ್ ಬಸ್ತಮಾನಹಳ್ಳಿ ಬಳಿ ಪ್ರಯಾಣಿಕರನ್ನು ಇಳಿಸಿ ಮುಂದೆ ಚಲಿಸಿದಾಗ ಸ್ಟೇರಿಂಗ್ ರಾಡ್ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದೆ. ಲೈಟ್ ಕಂಬಕ್ಕೆ ತಾಗಿದಾಗ ಬಸ್ನ ಎಡಭಾಗದಲ್ಲಿ ಯಾರು ಪ್ರಯಾಣಿಕರಿರಲಿಲ್ಲವೆಂದು ತಿಳಿದುಬಂದಿದೆ. ಮೋರಿ ದಾಟಿ ಮನೆಯ ಗೋಡೆಗೆ ಡಿಕ್ಕಿ ಹೊಡೆದು ನಿಂತ ಬಸ್ನ ಎಡ ಭಾಗ ಜಖಂ ಆಗಿದೆ. ಕೆಲ ಪ್ರಯಾಣಿಕರಿಗೆ ತರಚು ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಮಸ್ಥರ ಸಹಕಾರದಿಂದ ಟ್ರಾಕ್ಟರ್ ತರಿಸಿ ಬಸ್ ಅನ್ನು ಹಿಂದಕ್ಕೆ ಎಳೆಯಲಾಯಿತು. ಸ್ಥಳದಲ್ಲಿ ಬೆಸ್ಕಾಂ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರಿದ್ದರು.