ಪತ್ರಕರ್ತರ ಸಂಘದ ಭವನಕ್ಕೆ ಸೂಕ್ತ ಸ್ಥಳಾವಕಾಶ ಒದಗಿಸಿ: ಸಚಿವ ಜಾರ್ಜ್
ರಾಮನಗರ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನ ನಿರ್ಮಾಣಕ್ಕೆ ಸೂಕ್ತ ಸ್ಥಳಾವಕಾಶ ಒದಗಿಸಿ, ಶೀಘ್ರ ಕಾಮಗಾರಿ ಪ್ರಾರಂಭಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಜಿಲ್ಲಾಧಿಕಾರಿಗೆ ಸೂಚಿಸಿದರು.
ಪತ್ರಕರ್ತರ ಭವನ ನಿರ್ಮಾಣಕ್ಕೆ ರು.25 ಲಕ್ಷ ಬಿಡುಗಡೆಗೊಂಡು 2 ವರ್ಷ ಕಳೆದರೂ ಸೂಕ್ತ ಸ್ಥಳಾವಕಾಶ ಒದಗಿಸದ ಬಗ್ಗೆ ಪತ್ರಕರ್ತರ ಸಂಘದ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಗಮನ ಸೆಳೆದಾಗ ಅವರು ಜಿಲ್ಲಾಡಳಿತದಿಂದ ವಿವರಣೆ ಪಡೆದರು.
ಜಾಗದ ವಿಷಯವಾಗಿ ಏನೇ ತಕರಾರು ಇದ್ದರೂ ಬಗೆ ಹರಿಸಿ, ಆದಷ್ಟು ಜರೂರಾಗಿ ಸ್ಥಳಾವಕಾಶ ಒದಗಿಸಬೇಕು. ಈ ವಿಷಯದಲ್ಲಿ ವಿಳಂಬ ಬೇಡ. ಮುಂದಿನ ಸಭೆ ವೇಳೆಗೆ ಜಾಗ ಗೊತ್ತುಪಡಿಸಿ, ಕಾಮಗಾರಿಗೆ ಚಾಲನೆ ನೀಡಲು ಸಿದ್ಧತೆ ಕೈಗೊಳ್ಳಬೇಕು ಎಂದರು.