ಮನೆಗೆ ನುಗ್ಗಿದ ಬಸ್
ಆನೇಕಲ್ಲು: ಚಾಲಕನ ನಿಯಂತ್ರಣ ತಪ್ಪಿದ ಬಸ್ ಒಂದು ರಸ್ತೆ ಬದಿಯ ಲೈಟ್ ಕಂಬಕ್ಕೆ ಗುದ್ದಿ ನಂತರ ಮನೆ ಗೋಡೆಗೂ ಡಿಕ್ಕಿ ಹೊಡೆದ ಘಟನೆ ಆನೇಕಲ್ ಠಾಣಾ ವ್ಯಾಪ್ತಿಯ ಬೆಸ್ತಮಾನಹಳ್ಳಿಯಲ್ಲಿ ನಡೆದಿದೆ. ಅತ್ತಿಬೆಲೆಯಿಂದ ಆನೇಕಲ್ಲಿಗೆ ಬರುತ್ತಿದ್ದು ಬಸ್ ಸ್ಟೇರಿಂಗ್ ರಾಡ್ ಕಟ್ ಆಗಿ ನಿಯಂತ್ರಣ ತಪ್ಪಿದೆ. ಮೋರಿ ದಾಟಿ ಮನೆಯ ಗೋಡೆಗೆ ಡಿಕ್ಕಿ ಹೊಡೆದು ನಿಂತ ಬಸ್ನ ಎಡ ಭಾಗ ಜಖಂ ಆಗಿದೆ. ಕೆಲ ಪ್ರಯಾಣಿಕರಿಗೆ ತರಚು ಗಾಯಗಳಾಗಿವೆ.