ವೈಜ್ಞಾನಿಕ ರೀತಿಯಲ್ಲಿ ಹಸುಗಳ ಪೋಷಣೆ ಮಾಡಿ: ರಮೇಶ್
ಆನೇಕಲ್ಲು: ಹಾಲಿನ ಗುಣಮಟ್ಟ ಹೆಚ್ಚಿಸಲು ಹಾಗೂ ಶುದ್ಧ ಹಾಲು ಉತ್ಪಾದನೆಗಾಗಿ ವೈಜ್ಞಾನಿಕ ರೀತಿಯಲ್ಲಿ ಹಸುಗಳನ್ನು ಸಾಕಾಣೆ ಮಾಡಬೇಕೆಂದು ಬಮೂಲ್ ನಿರ್ದೇಶಕ ಆರ್.ಕೆ. ರಮೇಶ್ಕ್ರೆ ನೀಡಿದ್ದಾರೆ. ಅವರು ಆನೇಕಲ್ಲಿನ ಶೀಥಲ ಕೇಂದ್ರದಲ್ಲಿ ರಾಸುಗಳ ಕ್ಲೇಮು ವಿತರಣೆ ನಂತರ ಮಾತನಾಡಿ ಹಸುಗಳ ಪಾಲನೆಯಲ್ಲಿ ವಿವಿಧ ಹಂತಗಳಿದ್ದು ಕ್ರಮ ಬದ್ಧ ಆಹಾರ ನೀಡುವಿಕೆಯಿಂದ ಹಾಲು ಉತ್ಪಾದನೆ ಹೆಚ್ಚುತ್ತದೆ. ಹಾಲಿನಲ್ಲಿ ಜಿಡ್ಡಿನಾಂಶ ಹೆಚ್ಚಾದಲ್ಲಿ ಹಾಲಿಗೆ ಉತ್ತಮ ಬೆಲೆ ದೊರೆಯುತ್ತದೆ. ಹಾಲು ಒಕ್ಕೂಡ ಲೀಟರ್ ಹಾಲಿಗೆ ರು. 4 ಪ್ರೋತ್ಸಾಹ ಧನ ನೀಡುವ ಮೂಲಕ ರೈತರ ಅಭ್ಯುದಯಕ್ಕೆ ಕಾರಣವಾಗಿದೆ. ರೈತರೂ ಹಸಿರು ಮೇವು ಹಾಗೂ ಪಶು ಆಹಾರ ನೀಡುವ ಮೂಲಕ ಒಳ್ಳೆಯ ಹಾಲು ಪಡೆದು ಒಕ್ಕೂಟದ ಲಾಭಕ್ಕೆ ಕೈ ಜೋಡಿಸಬೇಕೆಂದರು.
ಯಶಸ್ವಿನಿ ಯೋಜನೆ: ತಾಲೂಕಿನ ಕ್ಷೀರ ರೈತರು ಯಶಸ್ವಿನಿ ಯೋಜನೆಯಿಂದ ವಂಚಿತರಾಗಲು ಬಿಡುವುದಿಲ್ಲ. ಒಕ್ಕೂಟದ ಪದಾಧಿಕಾರಿಗಳು ಆಯೋಜಕರ ಜೊತೆ ಸಂಪರ್ಕದಲ್ಲಿದ್ದು ಯಶಸ್ವಿನಿ ಪುನರ್ಜಾರಿಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು.
ಪ್ಯಾಕಿಂಗ್ ಘಟಕ: ಆನೇಕಲ್ ಶೀಥಲ ಕೇಂದ್ರದಲ್ಲಿ ಪ್ಯಾಕಿಂಗ್ ಘಟಕ ಪ್ರಾರಂಭಿಸಲು ನೀಲ ನಕ್ಷೆ ತಯಾರಾಗಿದೆ. ಈ ಮೊದಲು ಸಹ ಕಾಮಗಾರಿ ಅನುಷ್ಠಾನಕ್ಕಾಗಿ ಪ್ರಸ್ಥಾವನೆ ಸಲ್ಲಿಸಲಾಗಿತ್ತು. ಸ್ಥಳೀಯ ಶಾಸಕರ ಜೊತೆ ಸರ್ಕಾರಕ್ಕೆ ನಿಯೋಗ ತೆರಳಿ ಘಟಕ ಪ್ರಾರಂಭಕ್ಕೆ ಒತ್ತಾಯ ಮಾಡಲಾಗುವುದು. ಆನೇಕಲ್ಲಿನಿಂದ ಹಾಲನ್ನು ಬೆಂಗಳೂರಿಗ ಸಾಗಿಸಲು ವೆಚ್ಚ ದುಬಾರಿಯಾಗುತ್ತಿದೆ. ಪ್ಯಾಕೇಜ್ ಆದ ಹಾಲು ಆನೇಕಲ್ ತಾಲೂಕಿಗೆ ಬರುತ್ತಿದ್ದು ಒಂದು ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಪ್ಯಾಕೇಜಿಂಗ್ ಘಟಕ ಕಾರ್ಯಾರಂಭ ಹಾಲು ಒಕ್ಕೂಟಕ್ಕೆ ಲಾಭವಾಗಲಿದೆ ಎಂದರು. ಶಿಬಿರ ವ್ಯವಸ್ಥಾಪಕ ಬದರೀನಾಥ್, ಡಾ. ಮಂಜೇಶ್, ಚಂದ್ರೇಗೌಡ, ವ್ಯವಸ್ಥಾಪಕ ಚಂದ್ರಾರೆಡ್ಡಿ, ವಿಸ್ತರಣಾಧಿಕಾರಿಗಳಾದ ನಿಂಗಪ್ಪ, ನಾರಾಯಣರೆಡ್ಡಿ, ನೆರಳೂರು ಲೋಕೇಶ್ ಪಾಲ್ಗೊಂಡಿದ್ದರು.
ಡಿ.ಪಿಇಡಿ ವ್ಯಾಸಂಗಕ್ಕೆ ಅರ್ಜಿ ಆಹ್ವಾನ
ಚಿಕ್ಕಬಳ್ಳಾಪುರ: ಪ್ರಸಕ್ತ ಸಾಲಿಗೆ ಡಿ.ಪಿಇಡಿ ಕೋರ್ಸಿನ ಪ್ರಥಮ ವರ್ಷದ ವ್ಯಾಸಂಗಕ್ಕಾಗಿ ರಾಜ್ಯದ ಏಕೈಕ ಸರ್ಕಾರಿ ದೈಹಿಕ ಶಿಕ್ಷಣ ಕಾಲೇಜು ಅಗಲಗುರ್ಕಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರ್ಕಾರಿ ಕೋಟಾದ ಸೀಟುಗಳನ್ನು ತುಂಬಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಅರ್ಜಿಗಳನ್ನು ಜೂ.20 ರಿಂದ ಆ.6 ರವರೆಗೆ ಆನ್ಲೈನ್ನಲ್ಲಿ ಭರ್ತಿ ಮಾಡಿ ಸಲ್ಲಿಸಬೇಕೆಂದು ಸರ್ಕಾರಿ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ. 9141117977, 9844164369 ಸಂಪರ್ಕಿಸಿ.