ಸಿಎಂ ಆದೇಶ ಪಾಲಿಸಿದ ಉಸ್ತುವಾರಿ ಸಚಿವ
ರಾಮನಗರ: ಉಸ್ತುವಾರಿ ಸಚಿವರು ಹೊಣೆ ಹೊತ್ತ ಜಿಲ್ಲೆಗಳಿಗೆ ಭೇಟಿ ನೀಡುವ ವೇಳೆ ಖಡ್ಡಾಯವಾಗಿ ಪಕ್ಷದ ಕಚೇರಿಗೆ ಭೇಟಿ ನೀಡಿ, ಕಾರ್ಯಕರ್ತರ ಸಭೆ ನಡೆಸಬೇಕೆನ್ನುವ ಸಿದ್ದರಾಮಯ್ಯ ಸೂಚನೆಯನ್ನು ರಾಮನಗರದ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಚಾಚೂ ತಪ್ಪದೆ ಪಾಲಿಸಿದ್ದಾರೆ. ಸರ್ಕಾರವು ರಾಮನಗರಕ್ಕೆ ಈ ಮೊದಲು ಕೃಷ್ಣ ಬೈರೇಗೌಡರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಿಸಿ, 24 ತಾಸಿನಲ್ಲೇ ಬದಲಿಸಿತು. ಪ್ರವಾಸಿ ಮಂದಿರಕ್ಕೆ ಆಗಮಿಸಿದ ಜಾರ್ಜ್ ಅವರನ್ನು ಡಿಸಿ, ಎಸ್ಪಿ ಸಹಿತ ಅಧಿಕಾರಿಗಳು ಸ್ವಾಗತಿಸಿದರು. ನಂತರ ಅವರು ಕಾಂಗ್ರೆಸ್ ಕಚೇರಿಗೆ ತೆರಳಿದರು. ಅಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಅಭಿನಂದಿಸಿದರು.