ನೀರಿನ ಸೆಳೆತಕ್ಕೆ ಸಿಲುಕಿ ವ್ಯಕ್ತಿಯೊಬ್ಬ ಸಾವು
ಕ.ಪ್ರ.ವಾರ್ತೆ ಟಿ ಕನಕಪುರ ಟಿ ಜೂ.18
ಕನಕಪುರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಕಾವೇರಿ ಅರ್ಕಾವತಿ ಸಂಗಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ವ್ಯಕ್ತಿಯೊಬ್ಬರು ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಬೆಂಗಳೂರಿನ ಅಜಿಲಿಟಿ ಲಾಜಿಸ್ಟಿಕ್ ಕಂಪನಿ ಸೂಪವೈಜರ್ ನಾಗೇಶ್(23) ಎಂದು ಗುರುತಿಸಲಾಗಿದೆ.
ನಿನ್ನೆ ಮಧ್ಯಾಹ್ನ ಕಂಪನಿಯ 20 ಮಂದಿ ಸಹೋದ್ಯೋಗಿಗಳೊಂದಿಗೆ ಸಂಗಮಕ್ಕೆ ಬಂದಿದ್ದ ನಾಗೇಶ್ ತನ್ನ ಗೆಳೆಯರೊಂದಿಗೆ ಪ್ರಕೃತಿಯ ಸವಿಯನ್ನು ಸವಿಯುತ್ತಾ ನೀರಿನಲ್ಲಿ ಇಳಿದಾಗ ನದಿಯ ರಭಸಕ್ಕೆ ಸಿಲುಕಿ ಕೊಚ್ಚಿಹೊಗಿದ್ದಾರೆ.
ಮರುದಿನ ನಾಗೇಶ್ ಶವ ದೊರೆತ ಮೇಲೆ ಗೆಳೆಯರು ಸಾತನೂರು ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಶವವನ್ನು ಕನಕಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಒಪ್ಪಿಸಲಾಗಿದೆ.