ನಾಮ ನಿರ್ದೇಶನ ರದ್ದು ಸೂಚನೆ; 'ಹೈ'ಗೆ ಸಿಂಡಿಕೇಟ್ ಸದಸ್ಯರ ಮೊರೆ
ಬೆಂಗಳೂರು: ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದ ನಾಮ ನಿರ್ದೇಶಿತಗೊಂಡ ಸಿಂಡಿಕೇಟ್ ಸದಸ್ಯರ ಸದಸ್ಯತ್ವ ಹಿಂಪಡೆಯುವಂತೆ ಆದೇಶಿಸಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಕೆಲವು ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅವಧಿಗೆ ಮುನ್ನವೇ ಸದಸ್ಯತ್ವ ಹಿಂಪಡೆದುಕೊಳ್ಳುವಂತೆ ಉನ್ನತ ಶಿಕ್ಷಣ ಇಲಾಖೆ ಎಲ್ಲಾ ವಿವಿಗೆ ಅಧಿಸೂಚನೆ ಕಳುಹಿಸಿದ ಕ್ರಮ ಪ್ರಶ್ನಿಸಿ ಸದಸ್ಯರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಉನ್ನತ ಶಿಕ್ಷಣ ಇಲಾಖೆ ಸರ್ಕಾರದಿಂದ ಸರ್ಕಾರದಿಂದ ನಾಮನಿರ್ದೇಶಿತಗೊಂಡ ಸಿಂಡಿಕೇಟ್ ಸದಸ್ಯರನ್ನು ವಿವಿ ವಜಾಗೊಳಿಸುವಂತಜೂ.15ರಂದು ಆಧಿಸೂಚನೆ ಹೊರಡಿಸಲಾಗಿತ್ತು.