ಬ್ಯೂಟಿಪಾರ್ಲರ್ ನಿರ್ವಹಣೆ ತರಬೇತಿ
ಕನಕಪುರ: ಕೆನರಾಬ್ಯಾಂಕ್ ಪ್ರಾಯೋಜಿತ ಹಾರೋಹಳ್ಳಿ ಗ್ರಾಮದಲ್ಲಿರುವ ಗ್ರಾಮೀಣ ಮಹಿಳಾ ಅಭಿವೃದ್ಧಿ ಹಾಗೂ ತರಬೇತಿ ಸಂಸ್ಥೆ ಆವರಣದಲ್ಲಿ ಆಸಕ್ತ ಯುವತಿಯರು ಹಾಗೂ ಮಹಿಳೆಯರಿಗಾಗಿ ಉಚಿತ ಊಟ ವಸತಿ ಸಹಿತವಾಗಿ 30 ದಿನಗಳ ಬ್ಯೂಟಿ ಕಲ್ಚರ್, ಬ್ಯೂಟಿಪಾರ್ಲರ್ ನಿರ್ವಹಣೆ ಹಾಗೂ ಹೇರ್ ಡ್ರೆಸ್ಸಿಂಗ್ ತರಬೇತಿಯನ್ನು ಜುಲೈ1 ರಿಂದ ನೀಡಲಾಗುತ್ತದೆ. ಆಸಕ್ತ ಮಹಿಳೆಯರು ಜೂ. 30 ರೊಳಗಾಗಿ ಅರ್ಜಿಗಳನ್ನು ಸಲ್ಲಿಸಲು ಶಿಬಿರದ ನಿರ್ದೇಶಕರು ಕೋರಿದ್ದಾರೆ. ಹೆಚ್ಚಿನ ವಿವರಗಳಿಗೆ 080-27562260, 9980185577, 9972381707 ಸಂಪರ್ಕಿಸಿ.