ಮಾಗಡಿ ಮುತ್ತುಗಳು ಪುಸ್ತಕ ಹೊರ ತರಲು ನಿರ್ಧಾರ
ಮಾಗಡಿ: ತಾಲೂಕಿನಲ್ಲಿ ಹುಟ್ಟಿ, ಸಾಧಕನಾಗಿ ಮುಂದಿನ ಯುವ ಪೀಳಿಗೆಗೆ ಆದರ್ಶ ಎನ್ನುವಂತೆ ಬದುಕಿದ ಮಹನೀಯರ ಕುರಿತಾದ ಮಾಗಡಿ ಮುತ್ತುಗಳು ಎಂಬ ಪುಸ್ತಕವನ್ನು ಹೊರ ತರಲು ಮಾಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿರ್ಧರಿಸಿದೆ.
ಸಾಹಿತ್ಯ, ಸಂಸ್ಕೃತಿ, ಧಾರ್ಮಿಕ, ಸಮಾಜಸೇವೆ, ನೀರಾವರಿ, ಪರಿಸರ ಸಂರಕ್ಷಣೆ, ಶಿಕ್ಷಣ, ರಂಗಭೂಮಿ, ಸಿನಿಮಾ, ಕ್ರೀಡೆ, ಮತ್ತಿತರೆ ಕ್ಷೇತ್ರದಲ್ಲಿ ಮಾದರಿ ಎನ್ನುವಂತೆ ಸೇವೆ ಸಲ್ಲಿಸಿರುವ ಮಹನೀಯರಿಗೇನು ಮಾಗಡಿಯಲ್ಲಿ ಬರವಿಲ್ಲ. ತಾಲೂಕಿನಲ್ಲಿ ಸೇವೆ ಮಾಡಿರುವ ಇನ್ನು ಅನೇಕ ಎಲೆಮರೆ ಕಾಯಿ, ಹಣ್ಣುಗಳು ಕಾನನ ಮಲ್ಲಿಗೆಯಂತೆ ಮೌನದಲ್ಲಿ ಕೆಲಸ ಮಾಡುತ್ತಿರುವ ಸಾಧಕರಿದ್ದಾರೆ. ಕವಿ,ಲೇಖಕರು ಅವರ ಪರಿಚಯ,ಸಾಧಕರ ಮಾಹಿತಿಯನ್ನು ಬರೆದು ಕಳಿಸಬಹುದು. ಲೇಖನ ಬರೆದವರ ಪೋಟೋ, ಸಂಪೂರ್ಣ ವಿಳಾಸದೊಂದಿಗೆ ಜುಲೈ 15 ರೊಳಗೆ ಕೆಳಗಿನ ವಿಳಾಸಕ್ಕೆ ಕಳಿಸಬಹುದು. ಅಧ್ಯಕ್ಷರು ಗಂ.ದಯಾನಂದ್, ಕನ್ನಡ ಸಾಹಿತ್ಯ ಪರಿಷತ್,ಕುದೂರು, ಕೋಟೆ ಬೀದಿ ಕುದೂರು-561101 ಇಲ್ಲಿಗೆ ಕಳಿಸಬಹುದು, ಕಾರ್ಯದಶಿ ಬಸವರಾಜು, ಕನ್ನಡ ಸಾಹಿತ್ಯ ಪರಿಷತ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡೀಗೆರೆ ಮಾಗಡಿ ತಾಲೂಕಿಗೆ ಕಳಿಸಬಹುದು.