ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರಾಜ್ಯಪಾಲರ ಹೇಳಿಕೆಗೆ ಎಬಿವಿಪಿ ಖಂಡನೆ

Rashmi Kasaragodu
Updated On : 21 Jun 2013, 11:35 am

ರಾಮನಗರ: ಬೆಂಗಳೂರು ವಿಶ್ವ ವಿದ್ಯಾಲಯ ವಿಭಜನೆ ಕುರಿತ ಮಸೂದೆಯನ್ನು ವಾಪಸ್ ಕಳಿಸುವುದಾಗಿ ರಾಜ್ಯಪಾಲರು ನೀಡಿರುವ ಅವೈಜ್ಞಾನಿಕ ಹೇಳಿಕೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸಿದೆ. ಈ ಹಿಂದಿನ ಬಿಜೆಪಿ ಸರ್ಕಾರವು ಬೆಂಗಳೂರು ವಿವಿ ವಿಭಜನೆ ಕುರಿತಂತೆ ನಿವೃತ್ತ ಕುಲಪತಿ ಡಾ.ರುದ್ರಪ್ಪ ಅವರ ನೇತೃತ್ವದಲ್ಲಿ ತಜ್ಞರ ಸಮಿತಿ ರಚನೆ ಮಾಡಿತ್ತು. ವಿವಿ ವ್ಯಾಪ್ತಿಯಲ್ಲಿ ಸುಮಾರು 700ಕ್ಕೂ ಹೆಚ್ಚು ಕಾಲೇಜುಗಳು ಇರುವುದರಿಂದ ಶಿಕ್ಷಣದ ಗುಣಮಟ್ಟ, ಪರೀಕ್ಷಾ ನಿರ್ವಹಣೆ ಮಾಡುವುದು ಕಷ್ಟವೆಂದು ಸಮಿತಿ ತನ್ನ ವರದಿಯಲ್ಲಿ ತಿಳಿಸಿತ್ತು. ಆದ್ದರಿಂದ ಬಿಜೆಪಿ ಸರ್ಕಾರವು ಬೆಂಗಳೂರು ವಿವಿಯನ್ನು ವಿಭಜಿಸುವ ನಿರ್ಣಯ ಕೈಗೊಂಡು, ಸದನದಲ್ಲಿ ಮಸೂದೆಯನ್ನು ಮಂಡಿಸಿತ್ತು. ಆದರೆ ರಾಜ್ಯಪಾಲರು ವರದಿಯನ್ನು ಪರಾಮರ್ಶಿಸಿ, ಸೂಕ್ತ ತೀರ್ಮಾನ ತೆಗೆದುಕೊಳ್ಳದೆ ಮಸೂದೆಯನ್ನು ವಾಪಸ್ ಕಳುಹಿಸುವುದಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಎಬಿವಿಪಿ ಆರೋಪಿಸಿದೆ. ಆದ್ದರಿಂದ ಮುಖ್ಯಮಂತ್ರಿಗಳು ವಿವಿ ವಿಭಜನೆ ವಿಷಯದಲ್ಲಿ ಕೂಡಲೇ ಮಧ್ಯಪ್ರವೇಶಿಸಬೇಕು. ಶಿಕ್ಷಣದ ಗುಣಮಟ್ಟದ ದೃಷ್ಟಿಯಿಂದ ಬೆಂಗಳೂರು ವಿವಿಯನ್ನು ವಿಭಜನೆ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಕೆ.ರಮೇಶ್ ಆಗ್ರಹಿಸಿದ್ದಾರೆ.
ದೂರಸಂಪರ್ಕ
ತರಬೇತಿ ಮುಂದೂಡಿಕೆ
ರಾಮನಗರ: ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು ಹಾಗೂ ಉಪನ್ಯಾಸಕರಿಗೆ ಜೂ.24ರಿಂದ ಪ್ರಾರಂಭವಾಗಬೇಕಿದ್ದ ಉಪಗ್ರಹ ಆಧಾರಿತ ದೂರಸಂಪರ್ಕ ತರಬೇತಿ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. ಪರಿಷ್ಕೃತ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ಡಿ.ಲಿಂಗರಾಜು ತಿಳಿಸಿದ್ದಾರೆ.
ಬೈಕ್ ಕಳ್ಳತನ
ರಾಮನಗರ: ನಗರದ ರೇಷ್ಮೆ ಗೂಡಿನ ಮಾರುಕಟ್ಟೆ ಮುಂಭಾಗದ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಬೈಕನ್ನು ಕಳ್ಳತನ ಮಾಡಲಾಗಿದೆ. ಮರಿಲಿಂಗಪ್ಪ ಅವರೇ ಬೈಕ್ ಕಳೆದುಕೊಂಡವರು. ಬುಧವಾರ ಮಾರುಕಟ್ಟೆಗೆ ಗೂಡು ತಂದಿದ್ದ ಇವರು ಬೈಕ್ ಅನ್ನು ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದರು. ಮಧ್ಯಾಹ್ನದ ವೇಳೆಗೆ ಬಂದು ನೋಡಿದಾಗ ಬೈಕ್ ಕಳ್ಳತನವಾಗಿರುವುದು ತಿಳಿದಿದೆ.
ಮಹಿಳೆ ಸಾವು
ಶಿಡ್ಲಘಟ್ಟ: ಮಹಿಳೆಯೊಬ್ಬರು ಬಾವಿಯಲ್ಲಿ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ತಾಲೂಕಿನ ದಿಬ್ಬೂರಹಳ್ಳಿ ಠಾಣೆಯ ವ್ಯಾಪ್ತಿಗೆ ಸೇರಿದ ಬಶೆಟ್ಟಿಹಳ್ಳಿ ಗ್ರಾಮದ ಶಾಂತಮ್ಮ(40) ಮೃತಪಟ್ಟಿರುವ ದುರ್ದೈವಿ.  ಬಶೆಟ್ಟಿಹಳ್ಳಿ-ಕೆಂಪನಹಳ್ಳಿ ರಸ್ತೆಯಲ್ಲಿರುವ ತಿಮ್ಮಯ್ಯ ಎಂಬುವವರಿಗೆ ಸೇರಿರುವ ತೋಟದ ಬಾವಿಯಲ್ಲಿ ಶಾಂತಮ್ಮನ ಶವ ಪತ್ತೆಯಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement