ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸರ್ಕಾರಿ ಸಭೆಗಳಿಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ

Rashmi Kasaragodu
Updated On : 21 Jun 2013, 11:33 am

ಕ.ಪ್ರ.ವಾರ್ತೆ   ಹೊಸಕೋಟೆ:   ಜೂ. 21
ಜಿಲ್ಲಾ ಪಂಚಾಯ್ತಿ ವತಿಯಿಂದ ಅಮ್ಮಿಕೊಳ್ಳಲಾಗಿದ್ದ ಮೊದಲನೇ ವರ್ಷದ ಗ್ರಾಮ ಸಭೆ ಹಾಗೂ ನೂತನ ಕಾಮಗಾರಿಗೆ ಶಾಸಕ ಎಂಟಿಬಿ ನಾಗರಾಜ್ ಚಾಲನೆ ನೀಡಿದರು. ನಂತರ ಮಾತನಾಡಿ, 2013-14 ನೇ ಸಾಲಿನ ಮೊದಲನೇ ಸಭೆಯಲ್ಲಿ ಹಾಜರಾಗದ ಎಲ್ಲಾ ಅಧಿಕಾರಿಗಳಿಗೆ ಕಾನೂನು ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು. ಯಾರು ಬಂದಿಲ್ಲವೋ ಅವರ ಹೆಸರನ್ನು ತಿಳಿಸಿ ಎಂದರು.
ಜವಾಬ್ದಾರಿ: ತಾಲೂಕಿನಲ್ಲಿ ಅಧಿಕಾರಿಗಳು ತಮ್ಮ ಕೆಲಸವನ್ನು ದುರುಪಯೋಗ ಪಡೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಬಂದಿದೆ ಅಂತವರನ್ನು ನಾನು ಸುಮ್ಮನೆ ಬಿಡುವುದಿಲ್ಲ. ಸರ್ಕಾರ ನಿಮಗೆಲ್ಲರಿಗೂ ಸಂಬಳ ಕೊಡುತ್ತಿದೆ. ನನಗೂ ತಿಂಗಳಿಗೆ ರು. 80 ಸಾವಿರ ಸಂಬಳ ಕೊಡುತ್ತಿದೆ ಅದನ್ನು ಅರಿತು ನಿಮ್ಮ ಜವಾಬ್ದಾರಿ ಕೆಲಸಗಳನ್ನು ಮಾಡಿ. ಈ ಹಿಂದೆ ಏನು ಮಾಡಿದ್ದೀರೋ ನನಗೆ ತಿಳಿಯದು. ಆದರೆ ಮುಂದೆ ಮಾಡುವ ಕೆಲಸದಲ್ಲಿ ಯಾವುದೇ ಲೋಪದೋಷಗಳು ಕಂಡುಬಂದಲ್ಲಿ ನಾನು ಸುಮ್ಮನೆ ಬಿಡುವುದಿಲ್ಲ.
ನಾನು ಸಾರ್ವಜನಿಕರ ಅನುಕೂಲಕ್ಕಾಗಿ ಅವರ ಕಷ್ಟ ಸುಖಗಳ ನಿವಾರಿಸಲು ನಾನು ಶಾಸಕನಾಗಿ ಬಂದಿದ್ದೇನೆ. ಜನರ ನಂಬಿಕೆ ಉಳಿಸುವುದು ನನ್ನ ಕರ್ತವ್ಯ ನಾನು ಶಾಸಕಾಗಿ 30 ದಿನ ಕಳೆಯಿತಷ್ಟೇ. ಆದರೆ ತಾಲೂಕಿನಲ್ಲಿ 36 ಕೊಳವೆ ಬಾವಿಗಳನ್ನು ಕೊರೆಸಿದ್ದೇನೆ. ಅದರಲ್ಲಿ 22 ಬೋರ್ವೆಲ್ಗಳಲ್ಲಿ ನೀರು ಸಿಕ್ಕಿದೆ. 11 ರಲ್ಲಿ ಸಿಗಲಿಲ್ಲ ಆದರೂ ಮತ್ತೆ ಪ್ರಯತ್ನಿಸಿ ಜನರಿಗೆ ನೀರಿನ ಸಮಸ್ಯೆ ಪರಿಹಾರ ಮಾಡುತ್ತೇನೆ ಎಂದರು.
ನಿರ್ಲಕ್ಷ್ಯ ಸಲ್ಲದು: ಸರ್ಕಾರ ದಿಂದ ಬರುವ ಕೆಲವು ಅನುದಾನಗಳು ಮತ್ತೆ ಸರ್ಕಾರಕ್ಕೆ ಹಿಂದಿರುಗುತ್ತಿವೆ ಏಕೆ? ಇಲ್ಲಿನ ಜನರು ಯಾರು ಶ್ರೀಮಂತರಲ್ಲ ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ತರ ಆಗುತ್ತಿದೆ. ತಾಲೂಕಿನ ದೊಡ್ಡನಲ್ಲಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೂಗಟ್ಟಹಳ್ಳಿ ಚಿಕ್ಕನಲ್ಲಾಳ ಗ್ರಾಮದಲ್ಲಿ ಹೆಂಚಿನ ಮನೆಗಳಿದ್ದು, ಅದರಲ್ಲಿ ಕೆಲವು ಮನೆಗಳಿಗೆ ಟಾರ್ಪಾಲಿನ್ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಇಂತವರು ಯಾರ ಕಣ್ಣಿಗೂ ಕಾಣಿಸಲಿಲ್ಲವೆ? ಇದು ನನಗೆ ಬಹಳ ನೋವಾಗಿದೆ. ತಾಲೂಕಿನಲ್ಲಿ ಬರೀ ಅಕ್ರಮಗಳೇ ತುಂಬಿವೆ. ಇವುಗಳನ್ನು ನೋಡಲು ಹೋದರೆ ನಾನು ಐದು ವರ್ಷಗಳ ಕಾಲ ನೋಡಲೇಬೇಕಾಗಿರುತ್ತದೆ. ಆದ್ದರಿಂದ ಎಲ್ಲಾ ಅಧಿಕಾರಿಗಳು ಸಹಕರಿಸಿ, ತಮ್ಮ ತಮ್ಮ ಕೆಲಸಗಳನ್ನು ತಾವು ಮಾಡಿಕೊಳ್ಳುವುದು ಉತ್ತಮ ಎಂದರು. ಈ ಸಮಾರಂಭದಲ್ಲಿ ಪೂಜೆನಗ್ರಹಾರದ ಕಂಟ್ರಾಕ್ಟರ್ ಕೃಷ್ಣಪ್ಪ, ಹೆತ್ತಕ್ಕಿ ರಾಮಣ್ಣ, ಕಲ್ಲಪ್ಪ, ಪ್ರಸಾದ್ ಹಾಗೂ ಅನೇಕರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement