ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕರ್ತವ್ಯ ನಿರ್ವಹಿಸಿದರೆ ಡೆಂಘೀ ನಿಯಂತ್ರಣ ಸಾಧ್ಯ: ಮುತ್ತುರಾಜು

Rashmi Kasaragodu
Updated On : 23 Jun 2013, 1:13 am

ರಾಮನಗರ: ಸಮಾಜದ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಿದಾಗ ಮಾತ್ರ ಡೆಂಘೀ ನಿಯಂತ್ರಣ ಸಾಧ್ಯ ಎಂದು ಹೊಂಗನೂರು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಚ್.ಎಂ.ಮುತ್ತುರಾಜು ಅಭಿಪ್ರಾಯಪಟ್ಟರು. ಚನ್ನಪಟ್ಟಣದ ಹೊಂಗನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಡೆಂಘೀ ಜ್ವರದ ಬಗ್ಗೆ ಅರಿವು ಮೂಡಿಸುವ ಜಾಥಾ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡೆಂಘೀ ಜ್ವರವು ಮಾರಣಾಂತಿಕ ಕಾಯಿಲೆ ಅಲ್ಲ. ಇದು ಈಡಿಸ್ ಎಂಬ ಸೊಳ್ಳೆಯಿಂದ ಹರಡುವಂತ ಒಂದು ಸಾಂಕ್ರಾಮಿಕ ರೋಗವಾಗಿದೆ. ಸೊಳ್ಳೆಯನ್ನು ನಿಯಂತ್ರಿಸಿದರೆ ಈ ರೋಗವನ್ನು ತಡೆಗಟ್ಟಬಹುದು. ಇದಕ್ಕೆ  ಸಾರ್ವಜನಿಕರು ಸಹಕಾರ ಅಗತ್ಯ ಎಂದರು. ಡೆಂಘೀ ಜ್ವರ ತಡೆಗಟ್ಟಲು ಸೊಳ್ಳೆ ನಿಯಂತ್ರಣವೇ ಏಕೈಕ ಮಾರ್ಗ. ಈ ಸೊಳ್ಳೆಯು ಸ್ವಚ್ಛ ನೀರಿನಲ್ಲಿ ತನ್ನ ಸಂತಾನಾಭಿವೃದ್ಧಿ ಮಾಡುತ್ತದೆ. ಆದ್ದರಿಂದ ಒಂದು ವಾರಕ್ಕೂ ಹೆಚ್ಚು ಕಾಲ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿ, ಮಾನವನ ಪ್ರಾಣಕ್ಕೆ ಎರವಾದ ಈ ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಡಿವಾಣ ಹಾಕಬಹದು ಎಂದು ದೊಡ್ಡ ಆಲಹಳ್ಳಿ ಡಿ.ಪುಟ್ಟಸ್ವಾಮಿಗೌಡ ತಿಳಿಸಿದರು. ಮುಖ್ಯ ಶಿಕ್ಷಕಿ ಎಂ.ಪಿ.ಮಾಲತಿ, ಪಿಡಿಒ ಪುಟ್ಟಸ್ವಾಮಿ, ಶಿಕ್ಷಕರಾದ ಕೆ.ಎಂ.ರಾಜಣ್ಣ, ಶಿವಲಿಂಗು, ಎಚ್.ಪಿ.ರಮೇಶ್, ಬಿ.ಸಿ.ಸುರೇಶ್, ಕಾಡೇಗೌಡ, ಅಂಕೇಗೌಡ, ಗಿರಿಜಾ, ಯಶೋಧ ಜಿ ಶಿರಾಲಿಕರ್ , ಎಂ.ಪಿ.ಗುಂಡಪ್ಪ, ಕೃಷ್ಣವೇಣಿ, ರತ್ನಮ್ಮ, ಸುನಂದಾಬಾಯಿ, ಎಸ್.ಜಯಮ್ಮ, ರೇಣುಕ ಮತ್ತಿತರರು ಭಾಗವಹಿಸಿದ್ದರು. ತಾಲೂಕಿನಾದ್ಯಂತ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಡೆಂಘೀ ಜ್ವರದ ಬಗ್ಗೆ ಅರಿವು ಮೂಡಿಸುವಂತೆ ಸರ್ಕಾರದ ಆದೇಶಿಸಿತ್ತು.
28ರಂದು ರಾಷ್ಟ್ರೀಯ ಕ್ವಿಜ್
ಬೆಂಗಳೂರು: ಆಯುರ್ವೇದ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ 'ದಿ ಹಿಮಾಲಯ ಡ್ರಗ್ ಕಂಪನಿ' ರಾಷ್ಟ್ರೀಯ ಮಟ್ಟದ ಕ್ವಿಜ್ ಸ್ಪರ್ಧೆ ಏರ್ಪಡಿಸಿದೆ. ಭಾರತದ ಎಲ್ಲಾ ಆಯುರ್ವೇದಿಕ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಕ್ವಿಜ್‌ನಲ್ಲಿ ಪಾಲ್ಗೊಳ್ಳಬಹುದು. ಸ್ಪರ್ಧೆಯು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಜೂ. 28ರಂದು ನಡೆಯಲಿದೆ. ಈ ಸ್ಪರ್ಧೆಯನ್ನು ಭಾರತದ ಸುಮಾರು 192 ಆಯುರ್ವೇದಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಆಯೋಜನೆ ಮಾಡಲಾಗಿದೆ. ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ಅಸ್ಸಾಂಗಳಿಂದ ಭಾಗವಹಿಸಲಿದ್ದಾರೆ.


ಬಾಲ್ಯದಿಂದಲೇ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿ


ಕನಕಪುರ:  ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದ್ದು, ಪರಿಸರದ ಮೇಲಿನ ಅನಾಚಾರಗಳು ಪ್ರಾಕೃತಿಕ ವಿಕೋಪಗಳಿಗೆ ಕಾರಣವಾಗುತ್ತವೆ. ಬಾಲ್ಯದಿಂದಲೇ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿ ಪ್ರಕೃತಿಯ ಬಗ್ಗೆ ಪ್ರೀತಿ ಕಾಳಜಿಗಳನ್ನು ಮೂಡಿಸಬೇಕು ಎಂದು ಲಯನ್ ಮರಸಪ್ಪ ರವಿ ಹೇಳಿದ್ದಾರೆ.
 ಅವರು ಕನಕಪುರದ ಸೇಂಟ್ ಥಾಮಸ್ ಶಾಲೆ ಆವರಣದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಗಿಡನೆಡುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಆವರಣದಲ್ಲಿ ನೂರಾರು ಸಸಿಗಳನ್ನು ನೆಡುವುದರೊಂದಿಗೆ ಶಾಲೆಯ 500 ಮಕ್ಕಳಿಗೆ ಸಸಿಗಳ ವಿತರಣೆ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸೇಂಟ್ ಥಾಮಸ್ ಶಾಲೆಯ ವ್ಯವಸ್ಥಾಪಕ ಫಾ.ಫ್ರಾನ್ಸಿಸ್ ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ರೋಟರಿ ಅಧ್ಯಕ್ಷ ಸಿ.ವಿಜಯ್, ನಿವೃತ್ತ ಪ್ರಾಧ್ಯಾಪಕ ಪ್ರೊ.ಜಾರ್ಜ್‌ಪುಥಿಯಾದಂ, ಪ್ರಾಶುಪಾಲ  ಸಿಸ್ಟರ್ ರೀಟಾಟೆಲ್ಲಿಸ್, ಮುಖ್ಯಶಿಕ್ಷಕಿ ಸಿಸ್ಟರ್ ಜಪಮಾಲೆ ರಾಣಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement