ಬಡಗನಾಡು ಸಂಘ ಪದಾಧಿಕಾರಿಗಳ ಆಯ್ಕೆ
ವಿಜಯಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಡಗನಾಡು ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಸಂಘದ ನೂತನ ಅಧ್ಯಕ್ಷರಾಗಿ ವಿಜಯಪುರ ಎಸ್.ಕುಮಾರಸ್ವಾಮಿ, ಉಪಾಧ್ಯಕ್ಷರಾಗಿ ಹೊಸ ಕೋಟೆಯ ಟಿ.ಎನ್.ಮಂಜುನಾಥ್,ಕಾರ್ಯದರ್ಶಿಯಾಗಿ ಹುಲ್ಲೂರಿನ ಎನ್.ಮಂಜುನಾಥ್, ಸಹ ಕಾರ್ಯದರ್ಶಿಯಾಗಿ ವಿಜಯಪುರ ಸೂರ್ಯನಾರಾಯಣ, ಖಜಾಂಜಿಯಾಗಿ ಬಿದಲೂರಿನ ಶಶಿಧರ್, ಸಂಚಾಲಕರಾಗಿ ದೇವನಹಳ್ಳಿ ಡಿ.ಎನ್. ಸುರೇಶ್, ಸಂಘಟನಾ ಕಾರ್ಯದರ್ಶಿಯಾಗಿ ಜಿ.ಸತೀಶ್ ಕುಮಾರ್, ನಿರ್ದೇಶಕರಾಗಿ ಮೋಹನ್ ಕುಮಾರ್, ಹೊಸಕೋಟೆ ಮಂಜುನಾಥ್, ಎಸ್. ರಂಗನಾಥ್, ವಿಜಯಪುರ ಎಚ್.ಎಂ.ಮೂರ್ತಿ ಹಳಿಯೂರು, ಸಲಹೆಗಾರರಾಗಿ ಎ.ಎನ್. ರಾಮಚಂದ್ರಯ್ಯ ಹಾಗೂ ಎಚ್.ಆರ್.ಶೇಷಗಿರಿರಾವ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಡಗನಾಡು ಸಂಘದ ರಾಜ್ಯಾಧ್ಯಕ್ಷ ಬಿ.ಎಸ್.ರವಿಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.