ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವೇದಾಂತ ಫೌಂಡೇಷನ್ ಸಂಸ್ಥೆಯಿಂದ ಅಂಗನವಾಡಿಗೆ ಆಟಿಕೆಗಳ ವಿತರಣೆ

Rashmi Kasaragodu
Updated On : 23 Jun 2013, 1:12 am

ಕ.ಪ್ರ. ವಾರ್ತೆ    ದೇವನಹಳ್ಳಿ    ಜೂ.22
ಚಿಕ್ಕಬಳ್ಳಾಪುರ ಶಾಖೆಯಾದ ವೇದಾಂತ ಫೌಂಡೇಷನ್ ಸಂಸ್ಥೆಯವರು ಬೆಂ.ಗ್ರಾಮಾಂತರ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಕಾರದೊಂದಿಗೆ ದೇವನಹಳ್ಳಿ ತಾಲೂಕಿನ ಎಲ್ಲ 263 ಅಂಗನವಾಡಿ ಕೇಂದ್ರಗಳ ಮಕ್ಕಳಿಗಾಗಿ ತಲಾ ಒಂದು ಸಾವಿರು ರು. ಬೆಲೆ ಬಾಳುವ ಆಟಿಕೆ ಸಾಮಗ್ರಿಗಳ ವಿತರಣಾ ಸಮಾರಂಭ ಇಲ್ಲಿನ ಗುರುಭವನದಲ್ಲಿ ಶನಿವಾರ ಆಯೋಜಿಸಿದ್ದರು.  
ಶಾಸಕ ಪಿಳ್ಳಮುನಿಶಾಮಪ್ಪರವರು ಕಾರ್ಯಕ್ರಮ ನೆರವೇರಿಸಿ, ಆರೋಗ್ಯವಂತ ಮಕ್ಕಳು ನಮ್ಮ ದೇಶದ ಆಸ್ತಿ, ಆ ಮಕ್ಕಳ ಆರೋಗ್ಯ ಕಾಪಾಡಲು ವೇದಾಂತ ಫೌಂಡೇಷನ್ ಸಂಸ್ಥೆಯವರು ಕಳೆದ ವರ್ಷದಿಂದ ಈ ಭಾಗದ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದರ ಮೂಲಕ ಅಪೌಷ್ಟಿಕತೆಯ ನಿರ್ಮೂಲನೆಗಾಗಿ ಕಾರ್ಯ ನಿರ್ವಹಿಸುತ್ತಿರುವುದು ಅಭಿನಂದನೀಯ ಎಂದರು. ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದರಲ್ಲದೆ ನೀವು ಮಕ್ಕಳಿಗಾಗಿ ಮಾಡುವ ಸೇವೆ ನಿಮಗೆ ಆತ್ಮತೃಪ್ತಿ ತರುತ್ತದೆ ಎಂದರು.
ಇದೇ ಸಂಧರ್ಭದಲ್ಲಿ ತಹಸೀಲ್ದಾರ್ ಡಾ.ವೆಂಕಟರಾಜು ಮಾತನಾಡಿ ಮಕ್ಕಳ ಆರೋಗ್ಯ ದೃಷ್ಟಿಯಂದ ಕಾರ್ಯ ನಿರ್ವಹಿಸುತ್ತಿರುವ ವೇದಾಂತ ಫೌಂಡೇಷನ್ ಸಂಸ್ಥೆಯವರನ್ನು ಅಭಿನಂದಿಸಿ ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ಯೋಜನೆಗಳನ್ನು ಮಕ್ಕಳಿಗೆ ತಲುಪಿಸುವ ಜವಾಬ್ದಾರಿ ಮತ್ತು ನಿಸ್ವಾರ್ಥ ಮನೋಭಾವ ಇರಬೇಕು ಎಂದರು.
ಇದೇ ಸಂಧರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಎಂ.ನಾರಾಯಣಸ್ವಾಮಿ, ಬಿಇಒ ಮುನಿರಾಜು, ದಲಿತ ಮುಖಂಡರಾದ ಬುಳ್ಳಹಳ್ಳಿ ರಾಜಪ್ಪ, ತಾಲೂಕು ಪಂಚಾಯಿತಿ ಅಧ್ಯಕ್ಷ ರಾಧಿಕಾ ತ್ಯಾಗರಾಜ್ ಹಾಗೂ ಸಿಡಿಪಿಒ ಅಶ್ವತ್ಥಮ್ಮ ಮಾತನಾಡಿದರು. ವೇದಾಂತ ಫೌಂಡೇಷನ್ ಸಂಸ್ಥೆಯ ಜಿಜೋ ಮ್ಯಾಥ್ಯೂ, ಶ್ರೀಧರ್ ಉಪಸ್ಥಿತರಿದ್ದರು. ರವೀಂದ್ರ ಜೈನ್ ಸ್ವಾಗತ ಕೋರಿದರು. ಅರುಣ್ ಪ್ರಾರ್ಥನೆ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement