ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಕ್ರೀಡಾ ಮನೋಭಾವ ಮುಖ್ಯ'

Rashmi Kasaragodu
Updated On : 24 Jun 2013, 1:02 am

ವಿಜಯಪುರ: ಭಾರತದಲ್ಲಿ ಕ್ರಿಕೆಟ್ ಪರಿಚಿತವಾದ ಕಾಲದಿಂದಲೂ ಇಂದಿನವರೆಗೆ ಈ ಕ್ರೀಡೆ ಎಲ್ಲಾ ಯುವಕರ ಅಚ್ಚು ಮೆಚ್ಚಿನ ಆಟವಾಗಿದೆ. ಆದರೆ ಯಾವುದೇ ಕ್ರೀಡೆಯನ್ನು ಸಕಾರಾತ್ಮಕ ಮತ್ತು ಹವ್ಯಾಸವಾಗಿ ಬೆಳೆಸಿಕೊಳ್ಳಬೇಕು. ಬೆಟ್ಟಿಂಗ್ ಹಾವಳಿಯಿಂದ ದೂರವಿರುವಂತೆ ತಾಲೂಕು ಕಸಾಪ ಅಧ್ಯಕ್ಷ ಎನ್.ರಾಜ್ ಗೋಪಾಲ್ ತಿಳಿಸಿದರು.
ಪಟ್ಟಣದ ಕಿರಿಯ ಕಾಲೇಜು ಆಟದ ಮೈದಾನದಲ್ಲಿ ವಿಜಯಪುರ ಜೆಸಿಐ, ಜೆಜೆಸಿ, ಜೇಸೀರೇಟ್, ರಾಯಲ್ ಕ್ರಿಕೆಟ್ ಕ್ಲಬ್ ಮತ್ತು ಫಿಟ್‌ನೆಸ್ ಅಂಡ್ ಹೇಲ್ತೆ ಕೇರ್ ಜಿಮ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ
ತೃತೀಯ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಬಹುಮಾನ ವಿತರಿಸಿ ಮಾತನಾಡುತ್ತಿದ್ದರು. ಯುವ ಜೇಸಿ ಅಧ್ಯಕ್ಷ ಗಂಗಾಧರ್ ಮಾತನಾಡಿ ಸೋಲು ಗೆಲವು ಆಟದ ಎರಡು ಮುಖಗಳಾಗಿದ್ದು ಕ್ರೀಡಾ ಮನೋಭಾವ ಮುಖ್ಯ ಎಂದು ತಿಳಿಸಿದರು. ಟೌನ್ ಯುವ ಕಾಂಗ್ರೆಸ್ ಅಧ್ಯಕ್ಷ ಮಾತನಾಡಿದರು. ಪಟ್ಟಣದ
ಓಂ ಕ್ರಿಕೆಟರ್ಸ್ ಮತ್ತು ಆರ್‌ಸಿಸಿ ತಂಡ ಫೈನಲ್‌ನಲ್ಲಿ ಪಾಲ್ಗೊಂಡು ಓಂ ಕ್ರಿಕೆಟರ್ಸ್ ತಂಡ ಪಂದ್ಯ ವಿಜೇತರಾಗಿ ಪ್ರಥಮ ಬಹುಮಾನ 20 ಸಾವಿರ ನಗದು  ಮತ್ತು ಆಕರ್ಷಕ ಟ್ರೋಫಿಯನ್ನು ಪಡೆದರೆ, ಆರ್‌ಸಿಸಿ ತಂಡ ದ್ವಿತಿಯ ಸ್ಥಾನಗಳಿಸಿ 10 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ಪಡೆದರು. ಭಾರತ ಜನ ಜಾಗೃತಿ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಅಶ್ವತ್ಥಪ್ಪ, ಕಾರ್ಯದರ್ಶಿ ಸುರೇಂದ್ರ, ಸದಸ್ಯರಾದ ಗೌತಮ್, ಜಯರಾಂ, ಮುಖಂಡರಾದ ಮಂಜುನಾಥ್, ಅಮ್ಜದ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement