ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮನುಷ್ಯರಲ್ಲಿ ಮೋಸ, ವಂಚನೆ ಹೆಚ್ಚುತ್ತಿದೆ: ವಿಷಾದ

Rashmi Kasaragodu
Updated On : 24 Jun 2013, 1:02 am


ವಿಜಯಪುರ: ಸಮಾಜದಲ್ಲಿ ನಾವು  ಸದಾ ನಮ್ಮ ಕೆಲಸಗಳಲ್ಲಿ ಮಾತ್ರ ಸೀಮಿತವಾಗಿರದೆ ಆಧ್ಯಾತ್ಮ, ಧರ್ಮದ ಬಗ್ಗೆ ವಿಚಾರಧಾರೆ ಅಳವಡಿಸಿಕೊಂಡು ಜೀವನಸಾಗಿಸಬೇಕು ಎಂದು ಪಟ್ಟಣದ ಬೆಸ್ಕಾಂ ಕಿರಿಯ ಎಂಜಿನಿಯರ್ ಕೆ. ರಾಮಾನುಜಂ ತಿಳಿಸಿದರು.
ಅವರು ಪಟ್ಟಣದ ಕೋಲಾರ ರಸ್ತೆಯಲ್ಲಿರುವ ಶ್ರೀ ಕೃಷ್ಣ ಸತ್ಸಂಗ ಧ್ಯಾನ ಮಂದಿರದಲ್ಲಿ 95ನೇ ಶ್ರೀ ಕೃಷ್ಣ ಮಾಸಿಕ ವಿಚಾರಧಾರೆ ಗೋಷ್ಠಿಯಲ್ಲಿ ಮಹಾಭಾರತ ಸನ್ನಿವೇಶಗಳ ವಿಶ್ಲೇಷಣೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಿದ್ದರು. ಮನುಷ್ಯರಲ್ಲಿ ಅಂಧಕಾರ, ಮೋಸ, ವಂಚನೆಗಳು ಹೆಚ್ಚಾಗುತ್ತಿರುವ ಕಾರಣ ಪ್ರಪಂಚವು ವಿನಾಶದ ಹಂತವನ್ನು ತಲುಪುತ್ತಿದೆ. ಇತ್ತೀಚೆಗೆ ಉತ್ತರಭಾರತದ ಉತ್ತರ ಖಂಡದಲ್ಲಿ ಸಂಭವಿಸಿದ ಜಲಪ್ರಳಯಕ್ಕೂ ಸಹ ಮನುಷ್ಯನ ಅತಿಯಾದ ಪರಿಸರ ನಾಶವೇ ಕಾರಣವಾಗಿದೆ ಎಂದು ತಿಳಿಸಿದರು. ಪುರಸಭಾ ಸದಸ್ಯ ಹಾಗೂ ಜೆಸಿಐ ಸಂಸ್ಥೆಯ ಅಧ್ಯಕ್ಷ ಬಲಮುರಿ ಶ್ರೀನಿವಾಸ್ ಮಾತನಾಡಿ ನಮ್ಮ ದಿನನಿತ್ಯದ ಜೀವನದಲ್ಲಿ ಸ್ವಲ್ಪ ಸಮಯವಾದರೂ ಆಧ್ಯಾತ್ಮ, ಧರ್ಮದ ಬಗ್ಗೆ ಚಿಂತನೆಗೆ ಮೀಸಲಿಡಬೇಕು. ದೇವರ ಧ್ಯಾನವನ್ನು ಪ್ರತಿನಿತ್ಯ ಮೈಗೊಡಿಸಿಕೊಳ್ಳುವುದರಿಂದ ನಮ್ಮ ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿಯನ್ನು ನೀಡುತ್ತದೆ ಎಂದರು.
ಧಾರ್ಮಿಕ ಚಿಂತಕ ಹಾಗೂ ಗಾರೆ ಕೆಲಸದ ಮೇಸ್ತ್ರಿ ರಾಮದಾಸಪ್ಪ ದಂಪತಿ ಸನ್ಮಾನಿಸಲಾಯಿತು. ಪುರಸಭಾ ಮಾಜಿ ಉಪಾಧ್ಯಕ್ಷ ಜೆ.ಎಸ್.ರಾಮಚಂದ್ರಪ್ಪ, ಸದಸ್ಯ ಎಂ. ವರದರಾಜು, ಶ್ರೀ ಕೃಷ್ಣ ಸತ್ಸಂಗದ ಸಂಚಾಲಕ ವಿ.ಎಂ. ವೆಂಕಟೇಶ್, ವಿ. ನಾಗಯ್ಯ, ಟಿ.ಮಹಾತ್ಮಾಂಜನೇಯ, ನರಸಿಂಹಪ್ಪ ಇದ್ದರು .

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement