ಅರ್ಜಿ ಆಹ್ವಾನ
ಬೆಂಗಳೂರು: ಬೆಂಗಳೂರು ಪರಿಸರ ವಿಜ್ಞಾನ ವಿಭಾಗ ಮುಂಬೈನ ಬಾಬಾ ಅಟಾಮಿಕ್ ರೀಸರ್ಚ್ ಸೆಂಟರ್ ನೆರವಿನಿಂದ ಪಡೆದಿರುವ 'ಇನ್ವೆಸ್ಟಿಗೇಷನ್ ಆನ್ ದಿ ಗ್ಯಾಮ ಇರ್ರೇಡಿಯೇಟರ್ ಫಾರ್ ಎನ್ವಿರಾನ್ಮೆಂಟಲ್ ಅಪ್ಲಿಕೇಷನ್' ಮತ್ತು 'ಅಪ್ಲಿಕೇಷನ್ ಆಫ್ ಎನ್ವಿರಾನ್ಮೆಂಟಲ್ ಐಸೋಟೋಪ್ ಟೆಕ್ನಿಕ್ ಟು ಡಿಸ್ಕರ್ನ್ ಸೆಡಿಮೆಂಟೇಷನ್ ಪ್ಯಾರ್ಟನ್ ಇನ್ ಲೇಕ್ ಅಂಡ್ ರಿಸರ್ವಾಯರ್ ಅಂಡ್ ದೇರ್ ಇಂಪ್ಯಾಕ್ಟ್ ಆನ್ ಫ್ರೆಶ್ ವಾಟರ್ ಸಪ್ಲೈ ಟು ಬೆಂಗಳೂರು ಆ್ಯಂಡ್ ಹೈದರಾಬಾದ್' ಎಂಬ ಪ್ರಾಜೆಕ್ಟ್ ತಯಾರಿಸಲು ಸಂಶೋಧನಾ ಸಹಾಯಕ ಕಿರಿಯ/ಮತ್ತು ಹಿರಿಯ ಹುದ್ದೆಗೆಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಪರಿಸರ ವಿಜ್ಞಾನ/ ಭೂಗರ್ಭಶಾಸ್ತ್ರ/ ಅನ್ವಯಿಕ ಭೂಗರ್ಭಶಾಸ್ತ್ರದಲ್ಲಿ ಪಿಎಚ್.ಡಿ ಪಡೆದಿರುವವರು ಅರ್ಜಿ ಸಲ್ಲಿಸಬಹುದು. ಅರ್ಜಿ ಯನ್ನು ಜು.19 ರೊಳಗೆ ಪ್ರೊ.ಆರ್.ಕೆ. ಸೋಮಶೇಖರ್, ಪರಿಸರ ವಿಜ್ಞಾನ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು 560056ಕ್ಕೆ ಕಳುಹಿಸಬಹುದು. ಜು.26ರಂದು ಬೆಳಗ್ಗೆ 11ಗಂಟೆಗೆ ಪರಿಸರ ಅಧ್ಯಯನ ವಿಭಾಗದಲ್ಲಿ ಸಂದರ್ಶನಕ್ಕೆ ಹಾಜರಾಗಬಹುದು.
ಉಪನಯನ
ಕೂಟ ಮಹಾಜಗತ್ತು ಸಾಲಿಗ್ರಾಮ ಬೆಂಗಳೂರು ಅಂಗಸಂಸ್ಥೆ ಜುಲೈ 15ರಂದು ಆಯೋಜಿಸಿರುವ ಸಾಮೂಹಿಕ ಉಪನಯನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಹಾಗೂ ಅದೇ ದಿನ ವಧು- ವರಾನ್ವೇಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಜುಲೈ 5ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಮಾಹಿತಿಗೆ- 2980263/ 9164626332 ಸಂಪರ್ಕಿಸಿ.
ವಧು-ವರಾನ್ವೇಷಣೆ
ಹಳ್ಳಿಕಾರರ ಯುವ ವೇದಿಕೆ ಜೂ.30 ರಂದು, ಬೆಳಗ್ಗೆ 10 ಗಂಟೆಗೆ ವಧು-ವರಾನ್ವೇಷಣೆ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮಕ್ಕೆ ಸಕಲ ಹಳ್ಳಿಕಾರ ಬಂಧುಗಳು ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ ಸ್ಥಳ: ರಾಧಾಕೃಷ್ಣ ಕಲ್ಯಾಣ ಮಂಟಪ, ವಿರೇಶ್ ಚಿತ್ರಮಂದಿರದ ಹತ್ತಿರ, ಎಂ.ಸಿ.ಬಡಾವಣೆ, ವಿಜಯನಗರ, ಬೆಂಗಳೂರು-79. ಮೊ: 9448507014/9886739221
ಆಪ್ತಸಲಹಾ ತರಬೇತಿ
ಪ್ರಸನ್ನ ಆಪ್ತ ಸಲಹಾ ಕೇಂದ್ರ, ಮಲ್ಲೇಶ್ವರ ಶಾಖೆಯು ಆಪ್ತಸಲಹಾ ತರಬೇತಿಯನ್ನು ಜುಲೈ 28 ರಿಂದ ಪ್ರಾರಂಭಿಸಲಿದೆ. ಮಾನಸಿಕ ಒತ್ತಡ, ಖಿನ್ನತೆಗಳನ್ನು ನಿವಾರಿಸಿಕೊಳ್ಳಲು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಲು ಈ ತರಬೇತಿ ಪ್ರಯೋಜನಕಾರಿಯಾಗಲಿದೆ. ನಿಮ್ಹಾನ್ಸ್ನ ನುರಿತ ವೈದ್ಯರು, ವಿವಿಧ ಸಂಸ್ಥೆಗಳ ಆಪ್ತಸಲಹಾಕಾರರು, ಯೋಗ ಹಾಗೂ ಸಂಗೀತ ಕ್ಷೇತ್ರಗಳ ತಜ್ಞರು ತರಗತಿಗಳನ್ನು ನಡೆಸಿ ಕೊಡಲಿದ್ದಾರೆ. ಮೊದಲು ಬಂದ ಆಸಕ್ತರಿಗೆ ಆಧ್ಯತೆ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ. ವಿವರಗಳಿಗೆ- 9535279608/ 9986437960 ಸಂಪರ್ಕಿಸಿ.
ನಾಳೆಯಿಂದ 3 ದಿನ ಜಾದು ಸಮಾವೇಶ
ಬೆಂಗಳೂರು: ಇಂಟರ್ನ್ಯಾಷನಲ್ ಮ್ಯಾಜಿಕ್ ಅಕಾಡೆಮಿ ಮತ್ತು ಸೂರ್ಯ ಮ್ಯಾಜಿಕ್ ವರ್ಲ್ಡ್ ಸಹಯೋಗದೊಂದಿಗೆ ಜೂ.28ರಿಂದ ಮೂರು ದಿನಗಳ ಕಾಲ ಶಿಕ್ಷಕರ ಸದನದಲ್ಲಿ ಸಂಜೆ 6ಕ್ಕೆ 'ಮಾಯ ಮಾಯ-2013' ಸಮಾವೇಶ ಹಾಗೂ 'ಗ್ರ್ಯಾಂಡ್ ಗಾಳ ಶೋ' ಹೆಸರಿನ ಜಾದೂ ಪ್ರದರ್ಶನ ಹಮ್ಮಿಕೊಂಡಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿಯ ಸಂಯೋಜಕ ಸೂರ್ಯ, ಪ್ರದರ್ಶನದಲ್ಲಿ ಸಂಗ್ರಹವಾದ ಹಣವನ್ನು ಉತ್ತರಾಖಂಡ ಪ್ರವಾಹ ಪರಿಹಾರ ನಿಧಿಗೆ ನೀಡಲಾಗುವುದು ಎಂದರು. ಈ ಸಮಾವೇಶದಲ್ಲಿ ವಿದೇಶ, ದೇಶ, ರಾಜ್ಯದ ಜಾದೂಗಾರರು, ಜಾದೂ ಸಾಮಗ್ರಿಗಳ ಪ್ರದರ್ಶನ ಮಾರಾಟ, ಜಾದೂಗಾರರ ಸ್ಫರ್ಧೆಗಳು, ಪುರಸ್ಕಾರಗಳು ನಡೆಯಲಿವೆ ಎಂದರು.
ಸರ್ವೇಯರ್ ಮೇಲೆ ಹಲ್ಲೆ
ನೆಲಮಂಗಲ: ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದ ಜಮೀನನ್ನು ಅಳತೆ ಮಾಡಲು ಹೋಗಿದ್ದ ತಾಲೂಕು ಸರ್ವೆಯರ್ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿರುವ ಘಟನೆ ಪಟ್ಟಣದ ಸೊಂಡೆಕೊಪ್ಪ ರಸ್ತೆಯಲ್ಲಿ ಬುಧವಾರ ನಡೆದಿದೆ. ಹಲ್ಲೆಗೀಡಾದ ವ್ಯಕ್ತಿಯನ್ನು ತಾಲೂಕು ಸರ್ವೆಯರ್ ರಾಮಚಂದ್ರಪ್ಪ ಎಂದು ಗುರುತಿಸಲಾಗಿದೆ. ಈತನ ಮೇಲೆ ಮೋಹನ್ ಎಂಬಾತ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಈ ಬಗ್ಗೆ ಪೊಲೀಸರು ದೂರು ದಾಖಲಿಸಿದ್ದಾರೆ.
ಮಕ್ಕಳಿಗೆ ಲೇಖನ ಸಾಮಗ್ರಿ ವಿತರಣೆ
ಕನಕಪುರ: ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಉತ್ತಮ, ಗುಣಾತ್ಮಕ ಶಿಕ್ಷಣ ನುರಿತ ಅಧ್ಯಾಪಕರಿಂದ ದೊರೆಯುತ್ತಿದೆ. ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ತೊರೆದು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲು ಮಾಡಬೇಕು ಎಂದು ಶಿಕ್ಷಣಾಧಿಕಾರಿ ಶಿವರಾಮೇಗೌಡ ಹೇಳಿದರು. ಇಲ್ಲಿನ ಅಂಬೇಡ್ಕರ್ ನಗರದ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಟ್ಟೆ, ಪುಸ್ತಕ ಹಾಗೂ ಲೇಖನ ಸಾಮಗ್ರಿಗಳ ವಿತರಣೆ ನೆರವೇರಿಸಿ ಮಾತನಾಡಿದ ಅವರು, ಪುರಸಭಾ ಮಾಜಿ ಉಪಾಧ್ಯಕ್ಷೆ ನಿರ್ಮಲಾ ಗುಂಡಣ್ಣ ಅಧ್ಯಕ್ಷತೆ ವಹಿಸಿದ್ದರು ಸರ್ಕಾರ ಮಕ್ಕಳಿಗೆ ಶುಲ್ಕ ರಹಿತ ಉಚಿತ ಶಿಕ್ಷಣ ನೀಡುತ್ತಿದೆ. ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ, ಪ್ರೌಢಶಾಲೆ ಮಕ್ಕಳಿಗೆ ಸೈಕಲ್, ವಿದ್ಯಾರ್ಥಿ ವೇತನ, ವಸತಿ ನಿಲಯ ಸೌಲಭ್ಯ ನೀಡಿದೆ. ಸರ್ಕಾರಿ ಶಾಲೆಯ ಶಿಕ್ಷಕರು ಶೈಕ್ಷಣಿಕ ತಜ್ಞರ ತರಬೇತಿ ಹೊಂದಿದೆ. ಉತ್ತಮ ಶಿಕ್ಷಣ ಒದಗಿಸುತ್ತಿದ್ದಾರೆ. ಪೋಷಕರು ಈ ಎಲ್ಲಾ ಸವಲತ್ತುಗಳನ್ನು ಬಳಸಿಕೊಳ್ಳಲು ಮುಂದಾಗಬೇಕು ಎಂದು ಶಿವರಾಮೇಗೌಡ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಸಂಪನ್ಮೂಲಾ ಧಿಕಾರಿ ಚಂದ್ರಶೇಖರ್, ಮುಖ್ಯಶಿಕ್ಷಕಿ ನೇತ್ರಾವತಿ ಪಾಲ್ಗೊಂಡಿದ್ದರು.