ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶರಣರ ಆದರ್ಶ ಪಾಲನೆಯಿಂದ ನೆಮ್ಮದಿ: ಬಸವ ರಮಾನಂದ ಸ್ವಾಮೀಜಿ

Vishwanath S
Updated On : 27 Jun 2013, 1:10 am

ಕ.ಪ್ರ.ವಾರ್ತೆ , ನೆಲಮಂಗಲ ,  ಜೂ.26
ಶಿವಶರಣರು ತಮ್ಮ ನಡೆ -ನುಡಿಯಲ್ಲಿ ಸಮಾನತೆ ಕಾಪಾಡಿಕೊಂಡು ಸಮಾಜ ಒಪ್ಪುವಂತ ಆದರ್ಶ ದಂಪತಿಗಳಾಗಿ ಬಾಳಿ ತೋರಿಸಿದವರು ಎಂದು ವನಕಲ್ಲು ಮಠದ ಬಸವರಮಾನಂದ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಸೋಂಪುರ ಹೋಬಳಿಯ ವನಕಲ್ಲು ಮಠದಲ್ಲಿ ನಡೆದ ಶರಣ ಸಂಗಮ ಸಮಾರಂಭದ 'ಸಂಸಾರ ಮತ್ತು ಸಂಸ್ಕಾರ' ಕಾರ್ಯಕ್ರಮದಲ್ಲಿ ಆಶೀರ್ವಾದ ನೀಡಿ ಮಾತನಾಡುತ್ತಾ, ಈ ಶರಣರು ಆಸೆ ಆಮಿಷ ಎಲ್ಲವನ್ನು ತೊರೆದು ಕಾಯಕವೇ ಶ್ರೇಷ್ಠ ಎಂದು ಬಾಳುವ ಮೂಲಕ ಇತರರಿಗೂ ಆದರ್ಶವಾಗಿದ್ದರೂ ಶರಣರಲ್ಲಿ ಮೇಲುಕೀಳು ಎಂಬ ಭಾವನೆ ಇರಲಿಲ್ಲ. ಸಮಾನತೆ, ಕಾಯಕ ತತ್ವ, ಸಮಬಾಳು ಮತ್ತು ಅಹಿಂಸೆಯನ್ನು ಸಿದ್ಧಾಂತಗಳು ಪ್ರತಿಪಾದಿಸುತ್ತಾ ಬಾಳಿದರು. ಇವರ ಜೀವನದಲ್ಲಿ ಇಟ್ಟುಕೊಂಡಿದ್ದ ಆದರ್ಶಗಳು ಇಂದಿಗೂ ಸುಖ-ಶಾಂತಿ ಬಯಸುವವರಿಗೂ ಅವಶ್ಯಕ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರಿನ ಶೇಷಾದ್ರಿಪುರದ ಲಯನ್ಸ್ ಸಂಸ್ಥೆಯ ಅಧ್ಯಕ್ಷೆ ಜಯಲಕ್ಷ್ಮಮ್ಮ ಮಾತನಾಡಿ, ದಂಪತಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನದ ಸಂಸಾರ ಸಾಗಿಸಿದರೆ ಅದೇ ದೊಡ್ಡ ಸಂಸ್ಕಾರವಾಗುತ್ತದೆ ಎಂದರು. ಬ್ರಹ್ಮಗಿರಿ ತಾತಯ್ಯ ಅವರ ಮಠದ ಮರುಳಾರಾಧ್ಯ ಸ್ವಾಮೀಜಿ ಮಾತನಾಡಿ, ಇಂದು ಬದಲಾದ ಸನ್ನಿವೇಶಗಳಿಂದ ಒಡಹುಟ್ಟಿದವರು ಸಹ ಹಣದ ವಿಷಯವಾಗಿ ಶತ್ರುಗಳಂತೆ ಹೋರಾಡುವ ಪರಿಸ್ಥಿತಿ ಉಂಟಾಗಿದೆ. ಕುಟುಂಬದ ಸಂಬಂಧಗಳು ವ್ಯಾವಹಾರಿಕವಾಗುತ್ತಿವೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement