ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆನೆ ದಾಳಿ: ಮೃತನ ಕುಟುಂಬಕ್ಕೆ ನೆರವು

Vishwanath S
Updated On : 30 Jun 2013, 12:40 pm

ಹೊಸಕೋಟೆ:  ತಾಲೂಕಿನ ಓರೋಹಳ್ಳಿಯಲ್ಲಿ ಆನೆ ದಾಳಿಯಿಂದ ಮೃತಪಟ್ಟ ಮೈಲಪುರದ ಮಂಜುನಾಥ್ ಕುಟುಂಬಕ್ಕೆ ಮಾಜಿ ಸಚಿವ ಬಿ.ಎನ್. ಬಚ್ಚೇಗೌಡ 50000 ಗಳ ಆರ್ಥಿಕ ನೆರವು ನೀಡಿ ಸಾಂತ್ವನ ಹೇಳಿದರು. ಜನರು ಸಂಯಮದಿಂದ ವರ್ತಿಸಿದಲ್ಲಿ ಮಾಲೂರಿನಿಂದ ಹೊಸೂರಿನತ್ತ ಸಾಗುತ್ತಿದ್ದ ಆನೆಗಳು ಹಿಂಡು ತಾಲೂಕಿಗೆ ಬರುವ ಸಂಭವವಿರಲಿಲ್ಲ. ತಾಲೂಕಿನಲ್ಲಿ ಪ್ರಥಮವಾಗಿ ಆನೆ ದಾಳಿಗೆ ವ್ಯಕ್ತಿ ಮೃತಪಟ್ಟಿರುವುದು ದುರದೃಷ್ಟಕರ. ಮೃತನ ಕುಟುಂಬಕ್ಕೆ ಸರ್ಕಾರ ಆರ್ಥಿಕ ನೆರವು ನೀಡುವುದಷ್ಟೇ ಅಲ್ಲದೆ, ವೃದ್ಧ ಪೋಷಕರ ನಿರ್ವಹಣೆಗಾಗಿ ಸದಸ್ಯರೊಬ್ಬರಿಗೆ ಉದ್ಯೋಗ ಸಹ ಒದಗಿಸುವುದು ಸೂಕ್ತ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರು ಬಿ.ಎಂ.ನಾರಾಯಣಸ್ವಾಮಿ ತಾಲೂಕು ಬಿಜೆಪಿ ಅಧ್ಯಕ್ಷರು ಸಿ.ಮುನಿಯಪ್ಪ ಹಾಗೂ ಇತರೆ ಮುಖಂಡರು ಹಾಜರಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement