ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಭ್ಯರ್ಥಿಗಳು ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ

Parashurama
Updated On : 1 Mar 2013, 11:51 am

ಮಾಗಡಿ: ಚುನಾವಣೆ ನೀತಿ ಸಂಹಿತೆ ಜಾರಿಯಿದ್ದು, ಅಭ್ಯರ್ಥಿಗಳು ಕಾನೂನು ಉಲ್ಲಂಘನೆ ಮಾಡಿ ಅಕ್ರಮ  ಚಟುವಟಿಕೆ ನಡೆಸಿದ್ದೇ ಆದರೆ ಚುನಾವಣೆಯಲ್ಲಿ ಗೆದ್ದರೂ,  ಕಾನೂನು ಬದ್ಧವಾಗಿ ಅನರ್ಹಗೊಳಿಸಲಾಗುವುದು ಎಂದು ಚುನಾವಣಾಧಿಕಾರಿಯೂ ಆಗಿರುವ ತಹಸೀಲ್ದಾರ್ ಡಾ.ಬಿ.ಆರ್. ಹರೀಶ್  ನಾಯಕ್  ಎಚ್ಚರಿಕೆ ನೀಡಿದ್ದಾರೆ.
 ಅವರು ತಾಲೂಕು ಕಚೇರಿ ಸಭಾಂಗಣದಲ್ಲಿ   ಏರ್ಪಡಿಸಿದ್ದ ವಿವಿಧ ಪಕ್ಷಗಳ ಅಭ್ಯರ್ಥಿಗಳ ಚುನಾವಣಾ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಮೂರು ಹಂತದಲ್ಲಿ  ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 1 ರಿಂದ 8ನೇ ವಾರ್ಡ್ ವರೆಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಕೃಷ್ಣಪ್ಪ, 9 ರಿಂದ 16ನೇ ವಾರ್ಡ್ ವರೆಗೆ ಮುಖ್ಯಶಿಕ್ಷಕ ಎ.ಎನ್.ರಾಮಕೃಷ್ಣಯ್ಯ ಹಾಗು 17 ರಿಂದ 23ನೇ ವಾರ್ಡ್ವರೆಗೆ ಮುಖ್ಯ ಶಿಕ್ಷಕ ಡಿ.ಸಿ. ಬಸವರಾಜು  ಅವರಿಗೆ ಅಭ್ಯರ್ಥಿಗಳು ಫೆ16 ರಿಂದ ಮಾ.5 ವರೆಗೆ ನಡೆಸುವ  ಚುನಾವಣಾ  ಪ್ರಚಾರದ ಖರ್ಚು ವೆಚ್ಚದ  ಲೆಕ್ಕಪತ್ರಗಳನ್ನು ನೀಡುವುದು ಬಹಳ ಮುಖ್ಯ. ಚುನಾವಣೆಗೆ ಸಂಬಂಧಿಸಿದಂತೆ ಸ್ವಂತ ಕಾರಿನಲ್ಲಿ ಓಡಾಡಿದರೂ ಖರ್ಚಿನ  ಒಚರ್ ನೀಡಬೇಕು.   ಚುನಾವಣಾ ವೆಚ್ಚ 1.50 ಲಕ್ಷ ರು ಮೀರಬಾರದು, ಚುನಾವಣೆ ನಡೆದ 30 ದಿನದೊಳಗಾಗಿ ಅಭ್ಯರ್ಥಿಗಳು ಚುನಾವಣೆಯ ಖರ್ಚುವೆಚ್ಚದ  ಲೆಕ್ಕ ನೀಡದಿದ್ದರೆ ಮುಂದಿನ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಲಾಗುವುದು ಎಂದರು.  ಅಧಿಕಾರಿಗಳು, ಅಭ್ಯರ್ಥಿಗಳು ನಡೆಸುವ ಚುನಾವಣಾ ಪ್ರಚಾರದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಕಾನೂನು  ಬಾಹಿರ ಚಟುವಟಿಕೆ ನಡೆಸಿದರೆ  ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು.  ಈಗಾಗಲೇ ಅಂತಿಮವಾಗಿ ಮತದಾರರ ಪಟ್ಟಿ ಸಿದ್ಧವಾಗಿದೆ. ಮತ್ತೆ ಸೇರ್ಪಡೆ, ತೆಗೆದುಹಾಕುವ ಕೆಲಸವಿಲ್ಲ. ಮತದಾರರ ಪಟ್ಟಿಯಲ್ಲಿದ್ದು, ಗುರುತಿನ ಚೀಟಿ ಇಲ್ಲದಿದ್ದರೆ ಇತರೆ 30 ತರಹದ ಯಾವುದಾದರೂ ಒಂದು ಗುರುತಿನ ಚೀಟಿ ನೀಡಿ ಮತದಾನ ಮಾಡಲು ಅವಕಾಶವಿದೆ ಎಂದು ಡಾ. ಹರೀಶ್ ನಾಯಕ್ ವಿವರಿಸಿದರು.
ಆರ್.ಓ ಗಳಾದ ಡಾ.ಸಿ. ರಾಜಶೇಖರ್, ಕೆ.ಎನ್.ರೂಪಶ್ರೀ, ಹನುಮಂತಪ್ಪ, ಎ.ಆರ್.ಓಗಳಾದ ಆನಂದ್, ನರೇಂದ್ರ, ಪುರಸಭೆ ಮುಖ್ಯಾಧಿಕಾರಿ ಆರ್.ಮಂಜುನಾಥ್, ಚುನಾವಣಾ ಇಲಾಖೆಯ ಶಿರಸ್ತೇದಾರ್ ಶಿವಕುಮಾರ್ ಇತರೆ ಅಧಿಕಾರಿಗಳು ಹಾಗು ಅಭ್ಯರ್ಥಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments