ಪಾದಯಾತ್ರೆ ಮೂಲಕ ಪಟ್ಟಣದ ಬೀದಿಬೀದಿಗಳಲ್ಲಿ ಪ್ರಚಾರ
ಕನಕಪುರ: ಪುರಸಭಾ ಚುನಾವಣೆ ಪ್ರಯುಕ್ತ ಕನಕಪುರದಲ್ಲಿ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿದೆ. ಶಾಸಕ ಡಿ.ಕೆ. ಶಿವಕುಮಾರ್ ಚುನಾವಣೆಗೆ ಸ್ಪರ್ಧಿಸಿರುವ ಹುರಿಯಾಳುಗಳೊಂದಿಗೆ ಪಾದಯಾತ್ರೆ ಮೂಲಕ ಪಟ್ಟಣದ ಬೀದಿಬೀದಿಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
ಜಾತ್ಯತೀತ ಜನತಾದಳದ ಮುಖಂಡರುಗಳಾದ ಡಿ.ಎಂ. ವಿಶ್ವನಾಥ್, ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ನಾರಾಯಣಗೌಡ, ಸಿದ್ಧಮರಿಗೌಡ, ಬಿ.ನಾಗರಾಜು, ಬಿ.ಎಸ್.ಗೌಡ, ಚಂದ್ರು ಮೊದಲಾದವರು ಕೂಡಾ ಪಾದಯಾತ್ರೆ ಮೂಲಕ ಪಟ್ಟಣದ ವಾರ್ಡ್ಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಬಿಎಸ್ಆರ್ ಕಾಂಗ್ರೆಸ್ ಕೂಡಾ ಪ್ರಚಾರದಲ್ಲಿ ಹಿಂದೆಬಿದ್ದಿಲ್ಲ. ಪ್ರಸಕ್ತ ಚುನಾವಣೆಯಲ್ಲಿ ತನ್ನ ಛಾಪನ್ನು ಮೂಡಿಸಲು ಯತ್ನಿಸುತ್ತಿರುವ ಬಿಎಸ್ಆರ್ ಕಾಂಗ್ರೆಸ್ ತನ್ನ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಮಾರಸ್ವಾಮಿ ಮುಂದಾಳತ್ವದಲ್ಲಿ ಜನರ ಸಮೂಹದೊಂದಿಗೆ ಪ್ರಚಾರದ ಭರಾಟೆ ನಡೆಸಿದೆ. ಪಟ್ಟಣವ್ಯಾಪ್ತಿಯಲ್ಲಿ ಬಿಜೆಪಿ, ಕೆಜೆಪಿಗಳು ಇತರೆ ಪಕ್ಷಗಳಿಗೆ ಹೋಲಿಸಿದರೆ ಪ್ರಚಾರದಲ್ಲಿ ಅಂತಹ ಬಿಸಿ ಕಾಣುತ್ತಿಲ್ಲ. ಕಾಂಗ್ರೆಸ್, ಜೆಡಿಎಸ್ಗಳು ಈಗಾಗಲೇ ಎರಡು ಸುತ್ತುಗಳ ಪ್ರಚಾರ ನಡೆಸಿ ಜನರ ಮನವೊಲಿಕೆಗಾಗಿ ಸಕಲ ಪ್ರಯತ್ನ ಮಾಡುತ್ತಿವೆ. ಮತದಾರರು ಮಾತ್ರ ತಮ್ಮ ಒಲವನ್ನು ಬಿಟ್ಟುಕೊಡದೆ ಗುಪ್ತವಾಗಿದ್ದು ಪ್ರಚಾರದ ವೈಖರಿಯನ್ನು ಅನುಭವಿಸುತ್ತಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.