ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರಂಗಭೂಮಿ ಕಲಾವಿದರನ್ನು ಸಂಘ ಸಂಸ್ಥೆಗಳು ಗೌರವಿಸಲಿ

Parashurama
Updated On : 1 Mar 2013, 11:51 am

ನೆಲಮಂಗಲ: ತಾಲೂಕಿನಲ್ಲಿರುವ ರಂಗಭೂಮಿ ಕಲಾವಿದರನ್ನು ಸಂಘ ಸಂಸ್ಥೆಗಳು ಹಾಗೂ ಸರ್ಕಾರವು  ಗುರುತಿಸಿ ಗೌರವಿಸಿದಾಗ ಮಾತ್ರ ರಂಗಕಲೆಯು ಜೀವಂತಿಕೆ ಪಡೆದು ಕಲಾವಿದರಿಗೆ ಪ್ರೋತ್ಸಾಹ ದೊರೆತಂತಾಗುತ್ತದೆ ಎಂದು ಆರ್ಯ ವೈಶ್ಯ ಮಂಡಳಿಯ ಅಧ್ಯಕ್ಷ ಡಾ. ಲಕ್ಷ್ಮೀನಾರಾಯಣಶೆಟ್ಟಿ ಹೇಳಿದರು.
 ಅವರು ಪಟ್ಟಣದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಆರ್ಯ ವೈಶ್ಯ ಮಂಡಳಿಯ  ಸಹಯೋಗದೊಂದಿಗೆ ನಡೆದ 2 ದಿನಗಳ ಹಾಸ್ಯ ನಾಟಕೋತ್ಸವ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಆಧುನಿಕತೆಗೆ ಮಾರು ಹೋಗಿರುವ ಯುವಜನತೆ ಜೀವಂತ ಕಲೆಗಳಾದ ರಂಗ ನಾಟಕಗಳು, ಜಾನಪದ ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡಿ ಗೌರವಿಸುವ ಪರಿಪಾಠ ರೂಡಿಸಿಕೊಂಡರೆ ಕಲಾವಿದರಲ್ಲಿ ಆಸಕ್ತಿ ಹೆಚ್ಚಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ  ನಾಟಕೋತ್ಸವದ ಅಂಗವಾಗಿ ಪ್ರತಿಭಾರಂಗದ ಕಲಾವಿದರಿಂದ ದಾಶರಥಿ ದೀಕ್ಷಿತ್ ಅವರ ಸಿಡಿಲು ಮರಿ, ಕಲಾರಂಗದ ಕಲಾವಿದರಿಂದ ಚಿತ್ರನಟ ರಾಜಾನಂದ್ ವಿರಚಿತ ಬಿ.ಪಿ. ರಾದ್ಧಾಂತ ಹಾಗೂ ಶ್ರೀ ವಾಣಿ ಮಹಿಳಾ ಕಲಾ ಸಂಘದವರಿಂದ ಮೈಸೂರು ರಮಾನಂದ್ ವಿರಚಿತ ಕುಡಿತಾಯಾ ನಾಟಕಗಳನ್ನು ಪ್ರದರ್ಶಿಸಲಾಯಿತು.
 ಪ್ರತಿಭಾರಂಗದ ಅಧ್ಯಕ್ಷ ಬಿ.ರಾಮಯ್ಯ, ರಂಗಭೂಮಿ ಕಲಾವಿದರಾದ ಶ್ರೀ ರುದ್ರಾರಾಧ್ಯ, ಶಿವಶಂಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments