ಜೆಡಿಎಸ್ ಭದ್ರಕೋಟೆ ನುಗ್ಗಲು ಸಾಧ್ಯವಿಲ್ಲ: ಬಾಲಕೃಷ್ಣ
ಮಾಗಡಿ: ಮತಾದರರೇ ನನ್ನ ದೇವರು, ಕಾರ್ಯಕರ್ತರೆ ನನ್ನ ಅಸ್ತಿತ್ವ, ಹೀಗಿರುವಾಗ ಮೂರು ಜನ ಅಲ್ಲ ನೂರು ಮಂದಿ ವಿರೋಧಪಕ್ಷದ ನಾಯಕರು ಬಂದರು ಜೆಡಿಎಸ್ ಭದ್ರಕೋಟೆ ನುಗ್ಗಲು ಸಾಧ್ಯವಿಲ್ಲ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ನುಡಿದರು.
ಅವರು ಪಟ್ಟಣದಲ್ಲಿ ವಿವಿಧ ವಾರ್ಡ್ಗಳ ಜೆಡಿಎಸ್ ಅಭ್ಯರ್ಥಿಗಳ ಪರ ಮತಯಾಚಿಸುತ್ತಾ ಶಿಥಿಲ ಕೆಂಪೇಗೌಡ ಕೋಟೆಯನ್ನು ಕಟ್ಟಬಾರದು ಎಂದು ಅಡ್ಡಗಾಲು ಹಾಕಿದ್ದವರು ಈಗ ಕೆಂಪೇಗೌಡ ಹೆಸರೇಳಿಕೊಂಡು ರಾಜಕೀಯ ಮಾಡಲು ಬಂದಿದ್ದಾರೆ. ಮಾಗಡಿ ಕೆಂಪೇಗೌಡರು ಆಳಿದ ನಾಡು ನಮ್ಮದು, ಇಲ್ಲಿನ ಕೆಂಪೇಗೌಡರು ಕಟ್ಟಿರುವ ಕೋಟೆಯನ್ನು 10 ಕೋಟಿ ರು. ವೆಚ್ಚದಲ್ಲಿ ಪುನರ್ ಜೀರ್ಣೋದ್ಧಾರ ಗೊಳಿಸುತ್ತಿದ್ದೇನೆ. 1 ಕೋಟಿ ರು. ವೆಚ್ಚದಲ್ಲಿ ಶಿಥಿಲ ಸೋಮೇಶ್ವರಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧಾರ ಗೊಳಿಸಿದ್ದೇನೆ. ಪಟ್ಟಣಕ್ಕೆ ಕುಡಿಯುವನೀರು ಕೊಟ್ಟಿದ್ದೇನೆ ಎಂದರು.