ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜೆಡಿಎಸ್ ಭದ್ರಕೋಟೆ ನುಗ್ಗಲು ಸಾಧ್ಯವಿಲ್ಲ: ಶಾಸಕ ಬಾಲಕೃಷ್ಣ

Lingaraj Badiger
Updated On : 4 Mar 2013, 10:59 am

ಮಾಗಡಿ: ಮತಾದರರೇ ನನ್ನ ದೇವರು, ಕಾರ್ಯಕರ್ತರೆ ನನ್ನ ಅಸ್ತಿತ್ವ, ಹೀಗಿರುವಾಗ ಮೂರು ಜನ ಅಲ್ಲ ನೂರು ಮಂದಿ ವಿರೋಧಪಕ್ಷದ ನಾಯಕರು ಬಂದರು ಜೆಡಿಎಸ್ ಭದ್ರಕೋಟೆ ನುಗ್ಗಲು ಸಾಧ್ಯವಿಲ್ಲ ಎಂದು  ಶಾಸಕ ಎಚ್.ಸಿ. ಬಾಲಕೃಷ್ಣ ನುಡಿದರು.
   ಅವರು ಪಟ್ಟಣದಲ್ಲಿ ವಿವಿಧ ವಾರ್ಡ್‌ಗಳ ಜೆಡಿಎಸ್  ಅಭ್ಯರ್ಥಿಗಳ ಪರ ಮತಯಾಚಿಸುತ್ತಾ ಶಿಥಿಲ  ಕೆಂಪೇಗೌಡ ಕೋಟೆಯನ್ನು  ಕಟ್ಟಬಾರದು ಎಂದು ಅಡ್ಡಗಾಲು ಹಾಕಿದ್ದವರು ಈಗ ಕೆಂಪೇಗೌಡ ಹೆಸರೇಳಿಕೊಂಡು ರಾಜಕೀಯ ಮಾಡಲು ಬಂದಿದ್ದಾರೆ.  ಮಾಗಡಿ ಕೆಂಪೇಗೌಡರು ಆಳಿದ ನಾಡು ನಮ್ಮದು, ಇಲ್ಲಿನ ಕೆಂಪೇಗೌಡರು ಕಟ್ಟಿರುವ ಕೋಟೆಯನ್ನು ಸುಮಾರು 10 ಕೋಟಿ ರು. ವೆಚ್ಚದಲ್ಲಿ ಪುನರ್ ಜೀರ್ಣೋದ್ಧಾರ ಗೊಳಿಸುತ್ತಿದ್ದೇನೆ. 1 ಕೋಟಿ ರು. ವೆಚ್ಚದಲ್ಲಿ ಶಿಥಿಲ ಸೋಮೇಶ್ವರಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧಾರ ಗೊಳಿಸಿದ್ದೇನೆ. ಮಂಚನಬೆಲೆ ಜಲಾಶಯದಿಂದ ಪಟ್ಟಣಕ್ಕೆ ಕುಡಿಯುವನೀರು ಕೊಟ್ಟಿದ್ದೇನೆ. ಮತದಾರರ ಸಮಸ್ಯೆಗಳಿಗೆ ಸ್ಪಂದಿಸಿ ಬಗೆಹರಿಸಿದ್ದೇನೆ ಎಂದರು.
ಈ ಬಾರಿಯೂ ಜೆಡಿಎಸ್ ಪುರಸಭೆಯನ್ನು ಹಿಡಿಯಲಿದೆ. ಈ ನಿಟ್ಟಿನಲ್ಲಿ ಪುರಸಭೆಯ ವ್ಯಾಪ್ತಿಯ ಎಲ್ಲಾ ರಸ್ತೆಗಳು ಅಭಿವೃದ್ಧಿ ಪಡಿಸಿ ದಿನದ 24 ಗಂಟೆಯೂ ಶುದ್ಧಕುಡಿಯುವ ನೀರು ಕಲ್ಪಿಸಲು ಯೋಜನೆ ರೂಪಿಸಿದ್ದೇನೆ ಎಂದು  ಎಚ್.ಸಿ. ಬಾಲಕೃಷ್ಣ  ತಿಳಿಸಿದರು.
 ಅಣ್ಣಯ್ಯ, ರಂಗಮ್ಮ, ಯಶೋಧಮ್ಮ, ಮೂರ್ತಿ, ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement