ಲಾಭದತ್ತ ಟೌನ್ ಬ್ಯಾಂಕ್
ಹೊಸಕೋಟೆ: ಪಟ್ಟಣದ ಟೌನ್ ಕೋ ಆಪರೇಟಿವ್ ಬ್ಯಾಂಕ್, 2013 ರ ಫೆ. ಅಂತ್ಯಕ್ಕೆ 3.16 ಕೋಟಿ ರು.ಗಳಷ್ಟು ಲಾಭ ಗಳಿಸಿದ್ದು, ಮಾರ್ಚ್ ಅಂತ್ಯಕ್ಕೆ 2 ಕೋಟಿ ರೂ ಗಳ ನಿವ್ವಳ ಲಾಭ ಗಳಿಸುವ ನಿರೀಕ್ಷೆಯಿದೆ ಎಂದು ಬ್ಯಾಂಕ್ ಅಧ್ಯಕ್ಷ ಎಸ್. ಶ್ರೀನಿವಾಸ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬ್ಯಾಂಕ್ನ ಸದಸ್ಯತ್ವ 3 ವರ್ಷಗಳ ಅವಧಿಯಲ್ಲಿ ಸುಮಾರು 1300 ರಷ್ಟು ವೃದ್ಧಿಗೊಂಡಿದ್ದು, ಪ್ರಸ್ತುತ 14801 ಸದಸ್ಯರಿಂದ 3.73 ಕೋಟಿ ರು. ಗಳಷ್ಟು ಷೇರು ಬಂಡವಾಳ ಹೊಂದಿದೆ. ಲಾಭಾಂಶದಲ್ಲಿ ಪ್ರತೀ ವರ್ಷ ಅಂದಾಜು 60 ರಿಂದ 70 ಲಕ್ಷ ರು. ಗಳಷ್ಟು ಷೇರುದಾರರು, ಮಕ್ಕಳ ಶಿಕ್ಷಣ, ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸಲು ವೆಚ್ಚಮಾಡಲಾಗುತ್ತಿದೆ ಎಂದರು. ನಿರ್ದೇಶಕ ಪಿ. ಎಸ್. ಮಂಜುನಾಥ್, ಪ್ರಭಾರಿ ವ್ಯವಸ್ಥಾಪಕ ಪಾಟೀಲ್, ದೇವೇಂದ್ರ ಪ್ರಸಾದ್, ಎಚ್. ಎ. ಕೃಷ್ಣ ಇದ್ದರು.