ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಎಲ್.ಕೆ.ಜಿ ತರಗತಿ ಆಯ್ಕೆ ಪ್ರಕ್ರಿಯೆ

Rashmi Kasaragodu
Updated On : 5 Mar 2013, 12:24 pm

ಕ.ಪ್ರ. ವಾರ್ತೆ ಟಿ ವಿಜಯಪುರ ಟಿ  ಮಾ. 4
ಪಟ್ಟಣದ ಪ್ರಗತಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2013-14ನೇ ಸಾಲಿನ ಶಿಕ್ಷಣ ಹಕ್ಕು ಕಾಯಿದೆ(2009)ರ ಅಧಿನಿಯಮ ಅನ್ವಯ ಎಲ್.ಕೆ.ಜಿ ತರಗತಿಯ ಆಯ್ಕೆ ಪ್ರಕ್ರಿಯೆ ಪೋಷಕರ ಸಮ್ಮುಖದಲ್ಲಿ ನಡೆಯಿತು.
ಈ ಕಾಯಿದೆಯಡಿಯಲ್ಲಿ ಶಾಲೆಗೆ 60 ಅರ್ಜಿಗಳು ಸಲ್ಲಿಕೆಯಾಗಿದ್ದವು. ಆಯ್ಕೆ ಪ್ರಕ್ರಿಯೆಯಲ್ಲಿ 34 ಅರ್ಜಿಗಳನ್ನು ಗಣನೆಗೆ ತೆಗೆದುಕೊಳ್ಳಲಾಯಿತು. ಮುಂದಿನ ಪ್ರಕ್ರಿಯೆಗೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಕಳುಹಿಸಲಾಯಿತು. ಈ ಪ್ರವೇಶ ಪ್ರಕ್ರಿಯೆಯಲ್ಲಿ ಇಲಾಖೆಯ ಅಧಿಕಾರಿಗಳಾದ ವಿಜಯಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಜಿ. ರಾಮ ಚಂದ್ರ ಮತ್ತು ಚನ್ನರಾಯಪಟ್ಟಣ ಮಹಾತ್ಮಗಾಂಧಿ ಪ್ರೌಢಶಾಲೆಯ ಸಹಶಿಕ್ಷಕ ಕೆ. ದೊಡ್ಡಣ್ಣ ಅವರು ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಪ್ರಗತಿ ಪ್ರಾಂಶುಪಾಲ ಪ್ರಕಾಶ್, ಶಾಲಾ ಸಹಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement