ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪ್ರಚಾರ ನಿಷೇಧ: ಜಿಲ್ಲಾಧಿಕಾರಿ ಆದೇಶ

Rashmi Kasaragodu
Updated On : 5 Mar 2013, 12:25 pm

ಕ.ಪ್ರ. ವಾರ್ತೆ ಟಿ ರಾಮನಗರ ಟಿ  ಮಾ. 4
ಪೌರ ಸಂಸ್ಥೆಗಳ ಚುನಾವಣೆ ಬಹಿರಂಗ ಪ್ರಚಾರ ಸೋಮವಾರ ರಾತ್ರಿ ಅಂತ್ಯಗೊಂಡಿದೆ. ಅಭ್ಯರ್ಥಿ ಮತ್ತು ಪಕ್ಷಗಳಿಂದ ಸಭೆ, ಸಮಾರಂಭ, ಮೆರವಣಿಗೆ, ದೃಶ್ಯ, ಮುದ್ರಣ, ಶ್ರವಣ, ಎಲೆಕ್ಟ್ರಾನಿಕ್ ಮಾಧ್ಯಮ ಇತ್ಯಾದಿಗಳ ಮೂಲಕ ಪ್ರಚಾರ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ತಿಳಿಸಿದ್ದಾರೆ.  
ಕ್ಷೇತ್ರ ಬಿಟ್ಟು ತೆರಳಿ: ಬಹಿರಂಗ ಪ್ರಚಾರ ಅಂತ್ಯದ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು, ತಾರಾ ಪ್ರಚಾರಕರು, ಆಯಾ ವಾರ್ಡ್ ಮತದಾರರಲ್ಲದವರು ವ್ಯಾಪ್ತಿ ಬಿಟ್ಟು ತೆರಳಬೇಕು ಎಂದು ಆದೇಶಿಸಲಾಗಿದೆ.
ಇವಿಎಂ ಹಸ್ತಾಂತರ: ಜಿಲ್ಲೆಯ 4 ಪೌರ ಸಂಸ್ಥೆಗಳ ಚುನಾವಣೆಯ ವಿದ್ಯುನ್ಮಾನ ಮತ ಯಂತ್ರಗಳನ್ನು ಆಯಾ ತಾಲೂಕು ತಹಸೀಲ್ದಾರ್ ವಶಕ್ಕೆ ಸೋಮವಾರ ಒಪ್ಪಿಸಲಾಯಿತು. ರಾಮನಗರದ 80, ಚನ್ನಪಟ್ಟಣದ 60, ಕನಕಪುರದ 50 ಹಾಗೂ ಮಾಗಡಿಯ 28 ಸೇರಿದಂತೆ 218 ಮತ ಯಂತ್ರಗಳ ಕಾರ್ಯಕ್ಷಮತೆ ಪರಿಶೀಲಿಸಿ ಹಸ್ತಾಂತರಿಸಲಾಗಿದೆ.
ಮದ್ಯ ಮಾರಾಟ ನಿಷೇಧ: ಚುನಾವಣೆ ಹಿನ್ನೆಲೆಯಲ್ಲಿ ಮಾ.6ರ ಬೆಳಗ್ಗೆ 7 ರಿಂದ ಮತದಾನ ನಡೆಯುವ ದಿನವಾದ ಮಾ.7ರಂದು ಮಧ್ಯರಾತ್ರಿವರೆಗೆ, ಮತ ಎಣಿಕೆ ದಿನವಾದ ಮಾ.11ರ ಬೆಳಗ್ಗೆ 6 ರಿಂದ ರಾತ್ರಿ 8ರವರೆಗೆ ಒಣ ದಿನ ಘೋಷಿಸಲಾಗಿದೆ. ಈ ಅವಧಿಯಲ್ಲಿ ಮದ್ಯ ಮಾರಾಟ, ಹಂಚಿಕೆಯನ್ನು ನಿಷೇಧಿಸಲಾಗಿದೆ ಎಂದು ಶ್ರೀರಾಮರೆಡ್ಡಿ ಘೋಷಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement