ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ
ಕ.ಪ್ರ. ವಾರ್ತೆ ಟಿ ದೇವನಹಳ್ಳಿ ಟಿ ಮಾ. 4
ದೇವನಹಳ್ಳಿ ಪುರಸಭಾ ಚುನಾವಮೆಯಲ್ಲಿ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಪರವಾಗಿ ವಾರ್ಡ್ ನಂ.1, 7, 21ರಲ್ಲಿ ಮೂವರು ಅಭ್ಯರ್ಥಿಗಳು ಸ್ಪರ್ಧಿಸಿದ್ದು ಅವರ ಪರವಾಗಿ ತಾಲೂಕು ಅಧ್ಯಕ್ಷರಾದ ಹೆಚ್.ದೇವರಾಜ್ ನೇತೃತ್ವದಲ್ಲಿ ಚುನಾವಣಾ ಪ್ರಚಾರ ಯಾತ್ರೆ ಕೈಗೊಂಡರು.
ಮಾಜಿ ಸಚಿವ ಶ್ರೀರಾಮುಲು ಅವರು ತಮ್ಮ ಆಡಳಿತ ಕಾಲದಲ್ಲಿ ಪ್ರಾಮಾಣಿಕವಾಗಿ ಬಡವರ ಪರವಾಗಿ ಸೇವೆ ಸಲ್ಲಿಸಿದ್ದು ಈಗ ಅವರು ತಮ್ಮದೇ ಆದ ಪಕ್ಷವನನ್ನು ಸಂಘಟಿಸುತ್ತಿರುವುದರಿಂದ ಸ್ಥಳೀಯ ಸಂಸ್ಥೆಗಳಲ್ಲಿ ಬಿಎಸ್ ಆರ್ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವಂತಾಗಬೇಕು. ಆದ್ದರಿಂದ ವಿಜಯಪುರ ಮತ್ತು ದೇವನಹಳ್ಳಿ ಪುರಸಭೆಗಳಿಗೆ ಸ್ಪರ್ಧಿಸಿರುವ ಎಲ್ಲ 6 ಅಭ್ಯರ್ಥಿಗಳಿಗೆ ಮತ ನೀಡಬೇಕೆಂದು ಸಿ.ಮುನಿಯಪ್ಪ ತಿಳಿಸಿದರು.