ಶಿಕ್ಷಣಹಬ್ಬ-2013 ಸಮಾರಂಭ
ಕ.ಪ್ರ. ವಾರ್ತೆ ಟಿ ಕನಕಪುರ ಟಿ ಮಾ. 4
ಕನಕಪುರದ ಶಿಕ್ಷಣ ಫೌಂಡೇಷನ್ವತಿಯಿಂದ ಇಲ್ಲಿನ ಕೋಟೆ ಶ್ರೀ ವಿದ್ಯಾಗಣಪತಿ ದೇವಾಲಯದಲ್ಲಿ ಶಿಕ್ಷಣಹಬ್ಬ-2013 ಸಮಾರಂಭ ನಡೆಯಿತು. ಸಮಾರಂಭದ ಉದ್ಘಾಟನೆಯನ್ನು ಸಂಸ್ಥೆಯ ಸಮನ್ವಯಾಧಿಕಾರಿ ಕೆ.ಎನ್.ಶಿವಕುಮಾರ್ ನೆರವೇರಿಸಿದರು. ಕ್ಷೇತ್ರಶಿಕ್ಷಣಾಧಿಕಾರಿ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯು ದತ್ತು ಪಡೆದಿರುವ ತಾಲೂಕಿನ 127 ಸರ್ಕಾರಿ ಮಾಧ್ಯಮಿಕ ಶಾಲೆಗಳು ಹಾಗೂ 10 ಖಾಸಗೀ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಕ್ಷಣಹಬ್ಬದ ಅಂಗವಾಗಿ ವಿಜ್ಞಾನ ಮಾದರಿಗಳ ಪ್ರದರ್ಶನ, ಗಣಕಯಂತ್ರಗಳ ಉಪಯೋಗ ಕುರಿತು ಪ್ರಾತ್ಯಕ್ಷಿಕೆಗಳು ನೆರೆದ ವಿದ್ಯಾರ್ಥಿಗಳ ಮನಸೂರೆಗೊಂಡವು. ಪ್ರಾಥಮಿಕ ಶಾಲಾ ಮಕ್ಕಳಿಗೆ ದಿನಪತ್ರಿಕೆ ಓದುವ ಸ್ಪರ್ಧೆ, ಇಂಗ್ಲಿಷ್ ಪತ್ರಿಕೆಗಳನ್ನು ಓದುವ ಸ್ಪರ್ಧೆ ನಡೆಸಲಾಯಿತು. ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳಿಗೆ ಕನ್ನಡ, ಆಂಗ್ಲಭಾಷೆಗಳ ಬರವಣಿಗೆ ಸ್ಪರ್ಧೆ ನಡೆಯಿತು.